ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮೈಸೂರು ಭೇಟಿ ಹಿನ್ನೆಲೆಯಲ್ಲಿ ಮೈಸೂರು ನಗರ ವಿಧ್ವಂಸಕ ಕೃತ್ಯ ತಡೆ (ಬಾಂಬ್ ಪತ್ತೆ ದಳ) ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಬಾಂಬ್ ಸ್ಕ್ವಾಡ್ ಇನ್ ಚಾರ್ಜ್ ಇನ್ಸ್ಪೆಕ್ಟರ್ ಮೂರ್ತಿರವರ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತರವರ ನಿರ್ದೇಶನದಂತೆ ಶುಕ್ರವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ವಿಐಪಿ ಸಂಚರಿಸುವ ಮಾರ್ಗಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ಮಾಡಲಾಯಿತು. ಕಳೆದ ಒಂದು ವಾರದಿಂದಲೂ ಬಾಂಬ್ ಪತ್ತೆ ದಳದವರು ವಿಐಪಿ ಭೇಟಿ ನೀಡುವ ಸ್ಥಳಗಳನ್ನು ನಿರಂತರವಾಗಿ ಬಾಂಬ್ ಪತ್ತೆ ಉಪಕರಣಗಳು ಮತ್ತು ಶ್ವಾನಗಳೊಂದಿಗೆ ತಪಾಸಣೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಕಟ್ಟೆಚ್ಚರ ವಹಿಸಲಾಗಿದೆ.
Previous Articleಉಕ್ಕಿ ಹರಿಯುತ್ತಿರುವ ಹಳ್ಳ: ವಿದ್ಯಾರ್ಥಿಗಳ ಪರದಾಟ
Next Article ಗಂಡನಿಗಾಗಿ ಡ್ರಗ್ಸ್ ಮಾರಿದ ಪತ್ನಿ..!!