ಬೆಂಗಳೂರು : ನಾಳೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೇ ಫಲಿತಾಂಶವನ್ನು ನಿರೀಕ್ಷಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.
2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ, ಏಪ್ರಿಲ್ 22 ರಿಂದ ಆರಂಭವಾಗಿ ಮೇ 18 ಕ್ಕೆ ಮುಕ್ತಾಯಗೊಂಡಿದ್ದವು . ಈ ಬಾರಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನಾಳೆ ಸುದ್ದಿಗೋಷ್ಠಿ ನಡೆಸುವ ಮೂಲಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಫಲಿತಾಂಶವನ್ನು ಘೋಷಣೆ ಮಾಡಲಿದ್ದಾರೆ.
Previous Articleಮೋದಿ ಟೂರ್ ಪ್ಲಾನ್..?
Next Article ಅಪ್ಪನ ಕನಸಿನ ಕೋಕು ಕಿಚನ್ ಪ್ರಾರಂಭಿಸಿದ ಸೃಜನ್