ಹಿಮಾಚಲ ಪ್ರದೇಶ: ತಾಂತ್ರಿಕ ದೋಷದಿಂದ ರೋಪ್ ವೇ ಮಧ್ಯೆ ಕೇಬಲ್ ಕಾರು ಸಿಲುಕಿದ್ದು, 9 ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ.
ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹನ್ನೊಂದು ಪ್ರವಾಸಿಗರ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ.
ಸೋಲನ್ ಜಿಲ್ಲೆಯ ಪರ್ವಾನೊ ಎಂಬ ಪ್ರವಾಸಿ ತಾಣದಲ್ಲಿ ಸೋಮವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.
ಕೇಬಲ್ ಕಾರಿನಲ್ಲಿ 11 ಪ್ರವಾಸಿಗರು ಪ್ರಯಾಣಿಸುತ್ತಿದ್ದರು. ರೋಪ್ ವೇ ಮಧ್ಯದಲ್ಲಿ ಕೇಬಲ್ ಕಾರು ಸಿಲುಕಿಕೊಂಡಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಉಳಿದವರ ರಕ್ಷಣೆಗೆ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಸೋಲನ್ʼನ ಕಾಂಗ್ರೆಸ್ ಶಾಸಕ ಕರ್ನಲ್ ಧನಿ ರಾಮ್ ಶಾಂಡಿಲ್ ಮಾತನಾಡಿ, ಶೀಘ್ರದಲ್ಲೇ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು. ಅಗತ್ಯವಾದರೆ ಸೈನ್ಯದ ಸಹಾಯ ಪಡೆಯಲಾಗುವುದು ಎಂದು ಹೇಳಿದ್ದಾರೆ.
ರೋಪ್ ವೇನಲ್ಲಿ ಸಿಲುಕಿದ ಕೇಬಲ್ ಕಾರು: 9 ಪ್ರವಾಸಿಗರು ಅಪಾಯದಲ್ಲಿ
Previous Articleಸೇನಾ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಮೋದಿ ಆಗಮನ
Next Article ತೂತುಮಡಿಕೆ ಟ್ರೈಲರ್