ಬೆಂಗಳೂರು.ಜೂ.21- ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶ ಹಲವಾರು ಸವಾಲುಗಳನ್ನು ನಿಭಾಯಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿಯ ನಿರ್ವಹಣೆಯನ್ನು ಇಡೀ ವಿಶ್ವ ಕೊಂಡಾಡುತ್ತಿದೆ. ಆದರೂ ಅವರ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಟ್ಟ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಕೀಳು ಅಭಿರುಚಿಯ ರಾಜಕಾರಣಿ. ಎಲ್ಲರ ಬಗ್ಗೆ ಅಸಡ್ಡೆಯಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ದೇಶಕ್ಕೆ ಕೋವಿಡ್ ಅಪ್ಪಳಿಸಿದಾಗ ಪ್ರಧಾನಿ ಮೋದಿ ಎರಡು ವರ್ಷ ಜನರಿಗೆ ಉಚಿತ ಅನ್ನ, ವ್ಯಾಕ್ಸಿನ್ ಕೊಟ್ಟಿದ್ದಾರೆ. ಜಗತ್ತಿನಲ್ಲಿ ಹೆಚ್ಚು ವ್ಯಾಕ್ಸಿನ್ ಕೊಟ್ಟಿರುವ ದೇಶ ನಮ್ಮದು. ಇದೆಲ್ಲವನ್ನೂ ಮರೆತು ಸಿದ್ದರಾಮಯ್ಯ ಟೀಕೆಗಾಗಿ ಟೀಕೆ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ತಮ್ಮ ಬಗ್ಗೆ ಬಿಟ್ಟು ಉಳಿದವರೆಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಬಹಳ ಅಸಡ್ಡೆಯಿಂದ ಮಾತನಾಡುತ್ತಾರೆ. ಅವರು ಕೀಳು ಅಭಿರುಚಿಯ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.
ಇನ್ನು ರಾಹುಲ್ ಗಾಂಧಿಗೆ ED ವಿಚಾರಣೆ ಖಂಡಿಸಿ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಇಡೀ ದೇಶದಲ್ಲಿ ನಗೆಪಾಟಲಿಗೀಡಾಗುತ್ತಿದೆ. ಕಾನೂನು ಜನರಿಗೊಂದು ಗಾಂಧಿ ಕುಟುಂಬಕ್ಕೆ ಒಂದಲ್ಲ. ಜನ ಕಾಂಗ್ರೆಸ್ ಬಗ್ಗೆ ತುಚ್ಛವಾಗಿ ನೋಡುತ್ತಿದ್ದಾರೆ. ವಿಚಾರಣೆಯನ್ನೇ ಮಾಡಬಾರದು ಎನ್ನುವ ಇವರದು ಯಾವ ರೀತಿಯ ರಾಜಕೀಯ ಪಕ್ಷ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
Previous Articleನಾಗಚೈತನ್ಯ ಸಮಂತಾ ವಿಚ್ಛೇದನಕ್ಕೆ ಕಾರಣ ಇದೇನಾ?
Next Article ಪರಿಷ್ಕೃತ ಪಠ್ಯ ಪುಸ್ತಕ ಬೇಡ..!