ಬೆಂಗಳೂರು: ನಿನ್ನೆ(ಜೂ.21) ರಾತ್ರಿ ಮೂರು ಗಂಟೆ ನಡೆಸಲಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ನಟ ದಿಗಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಈ ಮಾಹಿತಿ ನೀಡಿದ್ದು, ದಿಗಂತ್ ಅವರನ್ಜು ಈಗ ಆಸ್ಪತ್ರೆಯ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
ದಿಗಂತ್ ಸ್ಪೋರ್ಟ್ಸ್ ಇಂಜುರಿಯಿಂದ ಬಳಲುತ್ತಿದ್ದಾರೆ. ಅವರ ಕುತ್ತಿಗೆ ಹಾಗೂ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕುಟುಂಬ ಸದಸ್ಯರೊಂದಿಗೆ ಗೋವಾಗೆ ಪ್ರವಾಸ ಹೋಗಿದ್ದ ದಿಗಂತ್, ಬೀಚ್ನಲ್ಲಿ ಸೋಮರ್ ಸಾಲ್ಟ್(ಬ್ಯಾಕ್ ಫ್ಲಿಪ್) ಮಾಡುವ ವೇಳೆ ಪೆಟ್ಟು ಮಾಡಿಕೊಂಡಿದ್ದರು. ಸದ್ಯ ನಟ ದಿಗಂತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಿನ್ನೆ ರಾತ್ರಿ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ದಿಗಂತ್ ಈಗ ವೈದ್ಯರ ಅಬ್ಸರ್ವೇಷನ್‌ನಲ್ಲಿದ್ದು, ಬುಧವಾರ ಬೆಳಗ್ಗೆ 10 ಗಂಟೆವರೆಗೂ ಅಬ್ಸರ್ವೇಷನ್‌ನಲ್ಲಿ ಇಡಲಾಗುತ್ತದೆ. ಬಳಿಕ ಹತ್ತು ಗಂಟೆಯ ಬಳಿಕ ಎರಡನೇ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲಾಗುವುದು ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.