ಗುವಾಹಟಿ: ಅಸ್ಸಾಂನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಇನ್ನೂ ಮುಂದುವರಿದಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ನೆರೆಯಿಂದಾಗಿ ಕಾಚಾರ್ ಜಿಲ್ಲೆಯ ಕ್ಯಾನ್ಸರ್ ಆಸ್ಪತ್ರೆ ಜಲಾವೃತವಾಗಿದೆ. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿ ಕ್ಯಾನ್ಸರ್ ಪೀಡಿತರಿಗೆ ರಸ್ತೆಯಲ್ಲೇ ಕೀಮೋ ಥೆರಪಿ ನಡೆಸುವ ಅನಿವಾರ್ಯ ಸ್ಥಿತಿ ಉಂಟಾಗಿದೆ.
ಮಳೆ ಇಲ್ಲದ ಸಮಯ ನೋಡಿಕೊಂಡು ಚಿಕಿತ್ಸೆ ಕೊಡಲಾಗುತ್ತಿದೆ. ಪ್ರವಾಹಕ್ಕೂ ಮೊದಲು ವಾರಕ್ಕೆ 20ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಆದರೆ ಈಗ ಅತೀ ತುರ್ತಾಗಿರುವ ಕೆಲವೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು, ಪ್ರವಾಹ ಆರಂಭಗೊಂಡಾಗಿನಿಂದ ಕೇವಲ 3 ಚಿಕಿತ್ಸೆ ಆಗಿದೆ ಎಂದು ಹೇಳಲಾಗಿದೆ.
ಅಸ್ಸಾಂನಲ್ಲಿ ನಿಲ್ಲದ ಮಳೆ, ಪ್ರವಾಹ: ಆಸ್ಪತ್ರೆಗೆ ನುಗ್ಗಿದ ನೀರು, ರಸ್ತೆಯಲ್ಲಿ ಚಿಕಿತ್ಸೆ
Previous Articleಕೊಡಗಿನಲ್ಲಿ ಮತ್ತೆ ಭೂಕಂಪ: ಜನರಲ್ಲಿ ಹೆಚ್ಚಿದ ಆತಂಕ
Next Article ಬರಿಗಾಲಲ್ಲಿ ಕಲ್ಲಿನ ಗೋಡೆ ಏರಿದ ಮಂಗಳೂರು ಕಮೀಷನರ್