ಅದ್ಭುತ ಮಾತುಗಾತಿಯಾಗಿರುವ ನಿರೂಪಕಿ ಅನುಶ್ರೀ, ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್ ಅವರುಗಳ ದೊಡ್ಡ ಅಭಿಮಾನಿ . ದೊಡ್ಮನೆಯ ಸದಸ್ಯರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಅನುಶ್ರೀ ಶಿವರಾಜ್ ಕುಮಾರ್ ಭಾಗವಹಿಸಿರುವ ಡಿಕೆಡಿ ಶೋ ನಿರೂಪಣೆ ಮಾಡುತ್ತಿದ್ದಾರೆ. ಈ ಶೋನಲ್ಲಿ ನಡೆದಿರುವ ಒಂದು ಆಪ್ತ ಘಟನೆಯ ವಿಡಿಯೋವನ್ನು ಅನುಶ್ರೀ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಅನುಶ್ರೀಗೆ ಶಿವಣ್ಣನಿಂದ ಗಿಫ್ಟ್ ಸಿಕ್ಕಿದೆ. ಹೌದು, ಅನುಶ್ರೀಗೆ ಶಿವಣ್ಣ ತಮ್ಮ ಜಾಕೆಟ್ ಗಿಫ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಅನುಶ್ರೀ ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಹಾಕಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ವಿಡಿಯೋ ನೋಡಿದ್ದಾರೆ.
‘ಇದು ಯಾವ ಜನ್ಮದ ಪುಣ್ಯ..ಕಳೆದ ವಾರ ಡಿಕೆಡಿ ಶೂಟ್ ವೇಳೆ ಹೇಳಿದೆ ಅಣ್ಣ ಜಾಕೆಟ್ ಸಕ್ಕತ್ ಆಗಿದೆ ಅಂತ. ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಅಂದ್ರು. ನಾನು ಸುಮ್ಮನೆ ಹೇಳಿರ್ತಾರೆ ಅನ್ಕೊಂಡೆ. ಅದರೆ ಎಷ್ಟೇ ಆದರೂ ಅಣ್ಣಾವ್ರ ರಕ್ತ ಅಲ್ವ? ಆಕಾಶ ನೋಡದ ಕೈ ಪ್ರೀತಿ ಹಂಚಿದ ಕೈಗಳು ಅದು. ಹೊರಡುವ ಮುನ್ನ ಜಾಕೆಟ್ ಬಿಚ್ಚಿ ಅದರ ಮೇಲೆ ‘with lots of love to dearest friend Anu’ ಅಂತ ಬರೆದು ಸಹಿ ಹಾಕಿ ತಮ್ಮ ಕಯ್ಯಾರೆ ಜಾಕೆಟ್ ತೊಡಿಸಿ ಮತ್ತೊಮ್ಮೆ ಮಮತೆ ಮರೆದ ಮುತ್ತಣ್ಣ. ಥ್ಯಾಂಕ್ಯೂ ಶಿವಣ್ಣ ನಿಮ್ಮ ರೂಪದಲ್ಲಿ ನಮ್ಮ ಪರಮಾತ್ಮನನ್ನು ಕಾಣ್ತಿದ್ದೀವಿ’ ಎಂದು ಅನುಶ್ರೀ ಬರೆದುಕೊಂಡಿದ್ದಾರೆ.
Previous Articleಶಾಲಾ ಮಕ್ಕಳನ್ನು ಒಕ್ಕಲೆಬ್ಬಿಸಿ ಈಜುಕೊಳ ನಿರ್ಮಿಸಲು ಮುಂದಾದ ಬಾಲಭವನ!
Next Article ದೇಶದಲ್ಲಿ 11,793 ಜನರಿಗೆ ಕೊರೋನಾ ಸೋಂಕು, 27 ಮಂದಿ ಸಾವು