ಬೆಂಗಳೂರು: ಯಾವುದೇ ಕಾರಣಕ್ಕೂ ನಕಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟ ಆಗಬಾರದು. ರೈತರಿಗೆ ಮೋಸ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಿ’ ಎಂದು ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದ್ದಾರೆ
ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳ ಸಭೆ ನಡೆಸಿದ ಅವರು, ‘ರೈತರಿಗೆ ತೊಂದರೆ, ಅನಾಹುತ ಆಗುವ ಮೊದಲೇ ಎಚ್ಚರ ವಹಿಸಿ. ಕೃಷಿ ಜಾಗೃತವಕೋಶವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಇಲಿ ಹಿಡಿಯದೇ ಹುಲಿಗೆ ಗುರಿ ಇಡಬೇಕು’ ಎಂದರು.
‘ಮಾರ್ಕೆಟಿಂಗ್ ಪರವಾನಗಿ ಇಲ್ಲದೇ ಯಾವುದೇ ಉತ್ಪನ್ನ ಮಾರುವಂತಿಲ್ಲ. ಕಂಪನಿ ಎಷ್ಟೇ ದೊಡ್ಡದಾದರೂ ನೋಟಿಸ್ ನೀಡಿ. ನಕಲಿ ಮಾರಾಟ ಜಾಲದ ಬುಡವನ್ನೇ ಕತ್ತರಿಸಿ’ ಎಂದೂ ಅಧಿಕಾರಿಗಳಿಗೆ ಹೇಳಿದರು.
‘ನಕಲಿ ಬೀಜ ಗೊಬ್ಬರ ಮಾರಾಟ ತಡೆಗೆ ಕೃಷಿ ವಿಚಕ್ಷಣಾ ದಳವನ್ನು ವಿಸ್ತರಿಸಲಾಗುವುದು. ಹೊಸದಾಗಿ ಎರಡು ವಿಚಕ್ಷಣಾ ದಳದ ಕಚೇರಿ ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆರಂಭವಾಗಲಿದ್ದು, ಮೈಸೂರಿನಲ್ಲಿ ಜುಲೈ 5ರಂದು ಕಚೇರಿ ಆರಂಭವಾಗಲಿದೆ’ ಎಂದರು.
Previous Articleಶಿವಕುಮಾರ್ ವಿರುದ್ಧದ FIRಗೆ ತಡೆ.
Next Article ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ಬಸವಣ್ಣ ಮಾರಾಟ ಬಲು ಜೋರು