ಶಿರಡಿ: ನಟಿ ಶರ್ಮಿಳಾ ಮಾಂಡ್ರೆ ಇತ್ತೀಚೆಗೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಶಿರಡಿಯಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಶರ್ಮಿಳಾ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕುರಿತ ಚಿತ್ರವನ್ನು ಅವರು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಶರ್ಮಿಳಾ ಮಾಂಡ್ರೆ ಅವರು ಸುದ್ದಿಯಲ್ಲಿದ್ದರು. ಸ್ನೇಹಿತರ ಜತೆ ಜಾಲಿ ರೈಡ್‌ಗೆ ಹೋಗಿದ್ದ ಅವರ ಕಾರು ಬೆಂಗಳೂರಿನಲ್ಲಿ ಅಪಘಾತಕ್ಕೆ ಗುರಿಯಾಗಿತ್ತು. ಶರ್ಮಿಳಾ ಮಾಂಡ್ರೆ ಅವರಿಗೆ ಗಾಯಗಳಾಗಿತ್ತು.
ಪೊಲೀಸರು ಈ ಸಂಬಂಧ ವಿಚಾರಣೆ ಕೂಡ ನಡೆಸಿದ್ದರು. ಬಳಿಕ ಪ್ರಕರಣ ಸದ್ದಿಲ್ಲದೆ ಮರೆಯಾಗಿತ್ತು.