ಚೆನ್ನೈ,ಜೂ.20-ತಮಿಳಿನ ಖ್ಯಾತ ನಟ ವಿಜಯ್ ಅವರ ಕಚೇರಿಯಲ್ಲಿ ರಿಪೇರಿ ಕಾರ್ಯಗಳು ನಡೆಯುವ ವೇಳೆ
ವ್ಯಕ್ತಿಯೊರ್ವ ನಿಗೂಢವಾಗಿ ಸಾವನ್ನಪ್ಪಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಣೈಯೂರುನ ಇಸಿಆರ್ ರಸ್ತೆಯಲ್ಲಿರುವ ವಿಜಯ್ ಅವರ ಕಚೇರಿಯಲ್ಲಿ ಕೆಲವು ರಿಪೇರಿ ಕಾರ್ಯಗಳು ನಡೆಯುತ್ತಿವೆ. ಇದರ ಭಾಗವಾಗಿ ಮೃತಪಟ್ಟ ಚಿತ್ರಕಲಾವಿದ ಪ್ರಭಾಕರನ್ ಅಲ್ಲಿ ಕೆಲಸ ಮಾಡುತ್ತಿದ್ದು, ಕಚೇರಿಗೆ ಬಣ್ಣ ಬಳಿಯಲು ಒಂದು ತಿಂಗಳ ಅವಧಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದ. ಕೆಲವು ದಿನಗಳ ಹಿಂದೆ, ಪ್ರಭಾಕರನ್ ತನ್ನ ಕುಟುಂಬ ಸದಸ್ಯರನ್ನ ಭೇಟಿಯಾಗಲು ಮನೆಗೆ ಹೋಗಿದ್ದು, ಕಳೆದ ಜೂ.16ರ ರಾತ್ರಿ ಮತ್ತೆ ಹಿಂದಿರುಗಿದ್ದಾನೆ.
ಆ ಸಮಯದಲ್ಲಿ ಆತ ಹೆಚ್ಚೇ ಕುಡಿದಿದ್ದು, ಮೇಲ್ವಿಚಾರಕರ ಬಳಿ ಪರೋಟ ತಿನ್ನಲು 100 ರೂ.ಗಳನ್ನ ಕೇಳಿದ್ದು, ಅದರಂತೆ ಮೇಲ್ವಿಚಾರಕರು 100 ರೂ.ಗಳನ್ನು ನೀಡಿದ್ದು, ಮರುದಿನ ಬೆಳಿಗ್ಗೆ 8 ಗಂಟೆಗೆ ಪ್ರಭಾಕರನ್ ಶವವಾಗಿ ಪತ್ತೆಯಾಗಿದ್ದಾನೆ. ಅವನ ಬಾಯಲ್ಲೂ, ಕೈಯಲ್ಲಿ ಒಂದು ಪರೋಟಾ ಇದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದು, ತನಿಖೆ ನಡೆಸುತ್ತಿದ್ದಾರೆ.
Previous Articleಪ್ರಾಂಶುಪಾಲರ ಮೇಲೆ ಉಪನ್ಯಾಸಕನಿಂದ ಹಲ್ಲೆ!
Next Article ಮೋದಿಗೆ ರೇಷ್ಮೆ ನೂಲಿನ ಪೇಟ