ವಿರಾಜಪೇಟೆ: ಕರ್ನಾಟಕದ ಕಾಶ್ಮೀರ ಕೊಡಗಿನ ವಿರಾಜಪೇಟೆಯ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವ ಅದಮ್ಯ ಉತ್ಸಾಹದೊಂದಿಗೆ ಕಣಕ್ಕಿಳಿದಿರುವ ಎ. ಎಸ್. ಪೊನ್ನಣ್ಣ (A S Ponnanna) ತಮ್ಮದೇ ಆದ ಶೈಲಿಯ ಪ್ರಚಾರದಿಂದ ಇಡಿ ಚುನಾವಣೆಯಲ್ಲಿ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಶಿವಕುಮಾರ್ ಸೇರದಂತೆ ಯಾರ ನೆರವು ಪಡೆಯದೆ, ಕ್ಷೇತ್ರದ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಕಳೆದ ಬಾರಿ ಇದೇ ತಮ್ಮ ಕೊನೆಯ ಚುನಾವಣೆ ಎಂದು ಹೇಳಿ ಸ್ಪರ್ಧೆ ಮಾಡಿದ್ದ ಬಿಜೆಪಿಯ ಕೆ ಜಿ ಬೋಪಯ್ಯ ಈ ಬಾರಿಯೂ ಇದೇ ವಾದವನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಕೊಡಗು ಹಿಂದುತ್ವ ಪ್ರಯೋಗ ಶಾಲೆಯ ಮೂಲಕ ಬಿಜೆಪಿಯ ಕೋಟೆಯಾಗಿ ಪರಿಣಮಿಸಿದೆ.
ಈ ಬಾರಿ ಇದನ್ನು ಛಿದ್ರ ಮಾಡುತ್ತೇನೆ ಎಂಬ ವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವ ಪೊನ್ನಣ್ಣ ಅವರಿಗೆ ಕೊಡವ ಸಮುದಾಯ ಬೆನ್ನಿಗೆ ನಿಂತಿದೆ ಇದರ ಜೊತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ನ್ಯಾಯವಾದಿಯಾಗಿರುವ ಪೊನ್ನಣ್ಣ ಅವರನ್ನು ಬೆಂಬಲಿಸುತ್ತಿದ್ದಾರೆ ಅಲ್ಪಸಂಖ್ಯಾತ ಸಮುದಾಯ ಕೂಡ ಕಾಂಗ್ರೆಸ್ ಜೊತೆ ನಿಂತಿದೆ. (A S Ponnanna)
ಹೈಕೋರ್ಟ್ ವಕೀಲರಾಗಿರುವ ಪೊನ್ನಣ್ಣ ಅವರು ಕೊಡವ ಸಮುದಾಯದ ಅಸ್ಮಿತೆಗಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ ಕೊಡವರ ಕೋವಿ ಹಕ್ಕಿನ ಪ್ರಶ್ನೆ ಬಂದಾಗ ಹೈಕೋರ್ಟ್ ನಲ್ಲಿ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಒತ್ತುವರಿ ಸಮಸ್ಯೆ, ಅರಣ್ಯ ಹಕ್ಕು ಮೊದಲಾದ ವಿಷಯದಲ್ಲಿ ಪೊನ್ನಣ್ಣ ಅವರು ತೆಗೆದುಕೊಂಡ ದೃಢ ನಿಲುವು ಕಾಂಗ್ರೆಸ್ ಪರವಾದ ವಾತಾವರಣ ಮೂಡಿಸಿದೆ. (A S Ponnanna)
ಅಲ್ಪಸಂಖ್ಯಾತರ ಓಲೈಕೆ, ಟಿಪ್ಪು ವಿವಾದ ಮೊದಲಾದವುಗಳನ್ನು ತಮ್ಮ ಪ್ರಚಾರದಿಂದ ದೂರ ಇಟ್ಟಿರುವ ಪೊನ್ನಣ್ಣ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮೊಟ್ಟಿಗೆ ಕರೆದೊಯುತ್ತಿದ್ದಾರೆ.
ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಕೆ ಜಿ ಬೋಪಯ್ಯ, ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ.
ಕೊಡವರ ಅಸ್ಮಿತೆಯ ಪ್ರಶ್ನೆ, ಅತಿವೃಷ್ಟಿ ,ಕಾಡಾನೆ ಹಾವಳಿ, ಅರಣ್ಯ ಹಕ್ಕು ಕಾಯ್ದೆಯ ಸಮಯದಲ್ಲಿ ಜಿಲ್ಲೆಯ ಜನರ ಪರ ನಿಲ್ಲದೆ ಕೇವಲ ಹಿಂದುತ್ವ, ಟಿಪ್ಪು ವಿವಾದದಲ್ಲೆ ಹೆಚ್ಚು ಸಮಯ ಕಳೆದರೂ ಎಂಬ ಆರೋಪ ಎದುರಿಸುತ್ತಿದ್ದು ಪೊನ್ನಣ್ಣ ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. (A S Ponnanna)
Also read.