ಬೆಂಗಳೂರು – ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ (BJP) ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಪಡೆದು ವಂಚಿಸಿರುವ ಚೈತ್ರಾ ಕುಂದಾಪುರ ಪ್ರಕರಣದ ಮತ್ತೊಬ್ಬ ಆರೋಪಿ
ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಮೂರನೇ ಆರೋಪಿಯಾಗಿರುವ ಹಾಲಶ್ರೀ ಅವರು ಚೈತ್ರಾ ಕುಂದಾಪುರ ಅವರ ಸಲಹೆಯ ಮೇರೆಗೆ ಗೋವಿಂದ ಬಾಬು ಪೂಜಾರಿಯಿಂದ ಹಣ ಪಡೆದಿದ್ದರು. ನಂತರದಲ್ಲಿ ಪೂಜಾರಿ ಪೊಲೀಸರಿಗೆ ವಂಚನೆಯ ಪ್ರಕರಣ ದಾಖಲಿಸುವುದಾಗಿ ಹೇಳಿದಾಗ ಹಂತ ಹಂತವಾಗಿ ಹಣ ವಾಪಸ್ ಕೊಡುವುದಾಗಿ ಹೇಳಿದ್ದರು. ಅದರೆ ನಂತರದಲ್ಲಿ ಯಾವುದೇ ಹಣ ನೀಡಿರಲಿಲ್ಲ.
ಇದಾದ ಬಳಿಕ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಹಾಗೂ ಅವರ ಆಪ್ತರನ್ನು ಬಂಧಿಸಿದ ಸಿಸಿಬಿ ಪೊಲೀಸರು ಹಾಲಶ್ರೀ ಅವರ ಬಂಧನಕ್ಕೆ ಬಲೆ ಬೀಸಿದ್ದರು.
ಹಾಲಶ್ರೀ ಸ್ವಾಮೀಜಿ ಕೆಲವು ದಿನಗಳ ಕಾಲ ರಾಜ್ಯದಲ್ಲೇ ಇದ್ದರು. ಒಂದು ಕಡೆ ನಿರೀಕ್ಷಣಾ ಜಾಮೀನು ಸಿಗುತ್ತಿಲ್ಲ, ಇನ್ನೊಂದು ಕಡೆ ಪೊಲೀಸರು ಬಿಡುತ್ತಿಲ್ಲ ಎಂಬ ಕಾರಣದಿಂದ ಭಯಗೊಂಡು ಹೈದರಾಬಾದ್‌ಗೆ ಹೋಗಿದ್ದರು. ಅಲ್ಲಿಂದ ಒಡಿಶಾದ ಕಟಕ್, ಆ ನಂತರ ಬಿಹಾರಕ್ಕೆ ಹೋಗಿ ತಲೆ ಮರೆಸಿಕೊಳ್ಳುವ ಪ್ಲ್ಯಾನ್ ಹೊಂದಿದ್ದರು ಎನ್ನಲಾಗಿದೆ. ಆದರೆ, ಇದರ ಸುಳಿವು ಪಡೆದ ಸಿಸಿಬಿ ಪೊಲೀಸರು ಕಟಕ್‌ನಲ್ಲಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಹಾಲಶ್ರೀ ಅವರ ಬಂಧನಕ್ಕಾಗಿ ಸಿಸಿಬಿಯ ಮೂರು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಶ್ರೀ ಗಳ ಕಾರಿನ ಚಾಲಕನನ್ನು ವಶಕ್ಕೆ ಪಡೆದು ಆತ ನೀಡಿದ ಮಾಹಿತಿ ಆಧರಿಸಿ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ,ಹಾಲಶ್ರೀ ಪ್ರತಿ ಒಂದೊಂದು ಗಂಟೆಗೆ ಒಂದೊಂದು ಲೊಕೇಶನ್ ಚೇಂಜ್ ಮಾಡುತ್ತಿದ್ದುದರಿಂದ ಅವರು ಪರಾರಿಯಾಗುತ್ತಿರುವ ಸ್ಪಷ್ಟ ಸೂಚನೆ ಸಿಕ್ಕಿತ್ತು. ಈಗ ಲೊಕೇಶನ್‌ಗಳ ಆಧಾರದಲ್ಲಿ ಬಂಧಿಸಲಾಗಿದೆ.
ಹಾಲಶ್ರೀ ಅವರು ಸಂಘ ಪರಿವಾರದ ನಾಯಕರಿಗೆ ಆಪ್ತರು ಎಂದು ನಂಬಿಸಿ ಹಲವರಿಂದ ಹಣ ಪಡೆದಿರುವ ಶಂಕೆಯಿದೆ. ಹೀಗಾಗಿ ಹಾಲಶ್ರೀ ಅವರ ಬಂಧನ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರಲ್ಲಿ ಆತಂಕ ಮೂಡಿಸಿದೆ.
2 ಪ್ರತಿಕ್ರಿಯೆಗಳು
озвучивание http://ozvuchivanie-pomeshhenij.ru/ .
переговорные комнаты в москве переговорные комнаты в москве .