ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅರಣ್ಯ ಸಚಿವರ ನಿರ್ದೇಶನದ ಬೆನ್ನಲ್ಲೇ Action | Forest Minister
    ಸುದ್ದಿ

    ಅರಣ್ಯ ಸಚಿವರ ನಿರ್ದೇಶನದ ಬೆನ್ನಲ್ಲೇ Action | Forest Minister

    vartha chakraBy vartha chakraಜನವರಿ 3, 20242 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಜ.3: ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲು ‌ಅರಣ್ಯ ಸಚಿವ (Forest Minister) ಈಶ್ವರ ಖಂಡ್ರೆ ಸೂಚನೆ ನೀಡಿದ‌ 24 ಗಂಟೆಯೊಳಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 60 ಕೋಟಿ ರೂಪಾಯಿ ಮೌಲ್ಯದ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ.
    ಬೆಂಗಳೂರು ಹೊರವಲಯದ ಕೆಂಗೇರಿ ಬಳಿಯ ತುರಹಳ್ಳಿ ಮೀಸಲು ಅರಣ್ಯದ ಬಿಎಂ ಕಾವಲು ಬಫರ್ ವಲಯದಲ್ಲಿ ಒತ್ತುವರಿ ಮಾಡಲಾಗಿದ್ದ 6.5 ಎಕರೆ ಭೂಮಿ ತೆರವು ಮಾಡಿ, ವಶಕ್ಕೆ ಪಡೆಯಲಾಗಿದೆ.
    ಹೊಸ ವರ್ಷದಲ್ಲಿ ಅರಣ್ಯ ಇಲಾಖೆಯ ಕಾರ್ಯ ಯೋಜನೆಗಳ ಬಗ್ಗೆ ಸಭೆ ನಡೆಸಿದ್ದರು. ಈ ವೇಳೆ ಉನ್ನತಾಧಿಕಾರಿಗಳಿಗೆ ಆದ್ಯತೆಯ ಮೇಲೆ ಒತ್ತುವರಿ ತೆರವು ಮಾಡಲು ಸಚಿವರು ಸೂಚಿಸಿದರು. ಇದರ ಬೆನ್ನಲ್ಲೇ ಇಂದು ಬೆಳಗ್ಗೆಯೇ ಬಿ.ಎಂ. ಕಾವಲಿನಲ್ಲಿ ಜೆ.ಸಿ.ಬಿ. ವಾಹನಗಳು ಗರ್ಜಿಸಿದವು.

    ಬೆಂಗಳೂರು ನಗರ ಡಿ.ಸಿ.ಎಫ್, ರವೀಂದ್ರಕುಮಾರ್, ಎ.ಸಿ.ಎಫ್. ಸುರೇಶ್ ಮತ್ತು ಆರ್.ಎಫ್.ಓ. ಗೋವಿಂದರಾಜ್ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯ ತಂಡ ತೆರವು ಕಾರ್ಯಾಚರಣೆಗಿಳಿದು ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಹಾಗೂ ಅಕ್ರಮ ಕಟ್ಟಡ ನೆಲಸಮ ಮಾಡಿದರು.
    ಕಾರ್ಯಾಚರಣೆ ಮೂಲಕ ಅರಣ್ಯ ಭೂಮಿ ವಶಕ್ಕೆ ಪಡೆದು ಗಡಿಯಲ್ಲಿ ಬಿದಿರು ಸೇರಿದಂತೆ ನಾನಾ ಜಾತಿಯ ಮರಗಳನ್ನು ನೆಡುವ ಮೂಲಕ ಮರುವಶಕ್ಕೆ ಪಡೆದರು.
    ಈ ಅರಣ್ಯ ಪ್ರದೇಶದಲ್ಲಿ ಸುಮಾರು 6.5 ಎಕರೆಯಷ್ಟು ಭೂಮಿಯನ್ನು ಮಧುಸೂದನಾನಂದ ಸ್ವಾಮಿ ಎಂಬುವವರು ಒತ್ತುವರಿ ಮಾಡಿ, ಅಕ್ರಮ- ಸಕ್ರಮದಲ್ಲಿ ಮಂಜೂರಾತಿ ಮಾಡುವಂತೆ ಅರ್ಜಿ ಸಲ್ಲಿಸಿದ್ದರು.
    ಅರಣ್ಯ ಭೂಮಿಯಾದ ಕಾರಣ,ಅಕ್ರಮ ಸಕ್ರಮದಲ್ಲಿ ಇದನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ತಿರಸ್ಕರಿಸಿತ್ತು.

    ಒತ್ತುವರಿದಾರರ ಬಳಿ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಕಂದಾಯ ದಾಖಲೆ, ಕ್ರಯಪತ್ರ, ಮಂಜೂರಾತಿ ಪತ್ರ, ಸಾಗುವಳಿ ಚೀಟಿ ಯಾವುದೂ ಇಲ್ಲದ ಕಾರಣ 2017ರ ಆಗಸ್ಟ್ ನಲ್ಲಿಯೇ ಈ ಒತ್ತುವರಿ ತೆರವಿಗೆ ಎ.ಸಿ.ಎಫ್. ನ್ಯಾಯಾಲಯ ಆದೇಶ ಹೊರಡಿಸಿತ್ತು.ಇದನ್ನು ಪ್ರಶ್ನಿಸಿ ಸಿಸಿಎಫ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
    ದಿ. 29.12.2023ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್ ಅವರು ಈ ಭೂಮಿ ಅರಣ್ಯ ಇಲಾಖೆಗೆ ಸಂಬಂಧಿಸಿದ್ದೆಂದು ಮಹತ್ವದ ಆದೇಶ ನೀಡಿದ್ದರು. ನಿನ್ನೆ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಬೆಂಗಳೂರು ಸುತ್ತಮುತ್ತ ಬೆಲೆ ಬಾಳುವ ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ ಆದ್ಯತೆಯ ಮೇಲೆ ತೆರವು ಮಾಡುವಂತೆ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
    ಕಾರ್ಯಾಚರಣೆ ಬಗ್ಗೆ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದ್ದು,ಬೆಂಗಳೂರು ಸುತ್ತಮುತ್ತ ಭೂಮಿಗೆ ಬಂಗಾರದ ಬೆಲೆ ಇದೆ. ಕೆಲವರು ಸ್ವಾರ್ಥಕ್ಕಾಗಿ ಕೋಟ್ಯಂತರ ರೂ. ಬೆಲೆಬಾಳುವ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ. ಪ್ರಕೃತಿ, ಪರಿಸರ, ಕಾಡು ಮತ್ತು ವನಸಂಪತ್ತು ಉಳಿಸುವುದೇ ಇಲಾಖೆಯ ಕರ್ತವ್ಯವಾಗಿದ್ದು, ಬೆಂಗಳೂರಿನಲ್ಲಿ ಆದೇಶ ಆಗಿರುವ ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ‌ ಎಂದು ಹೇಳಿದರು.

    Verbattle
    Verbattle
    Verbattle
    forest Forest Minister Government Karnataka m mi News Politics ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಮೋಹಕತಾರೆ ರಮ್ಯಾ ಅಖಾಡಕ್ಕೆ | Ramya
    Next Article ಫೆಬ್ರವರಿ 29ರಿಂದ Bangalore Film Festival
    vartha chakra
    • Website

    Related Posts

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಮಾರ್ಚ್ 29, 2026

    ಶಾಲೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು!

    ಮಾರ್ಚ್ 28, 2026

    IPL ಇತಿಹಾಸದಲ್ಲೇ ಮೆಗಾ ಡೀಲ್!

    ಮಾರ್ಚ್ 27, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    ನೇಪಾಳ ಮಾಜಿ ಪ್ರಧಾನಿ ಬಂಧನ

    ಶಾಲೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jeffreyessen ರಲ್ಲಿ ಕೋರ್ಟ್ ನಲ್ಲಿ ಕಾಂಗ್ರೆಸ್ ಗೆಲುವು
    • Jamesnab ರಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್
    • Tadzjc ರಲ್ಲಿ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕಂತೆ.
    Latest Kannada News

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಮಾರ್ಚ್ 29, 2026

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    ಮಾರ್ಚ್ 29, 2026

    ನೇಪಾಳ ಮಾಜಿ ಪ್ರಧಾನಿ ಬಂಧನ

    ಮಾರ್ಚ್ 28, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.