ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ವಿವಿಧ ರಾಜಕೀಯ ಪಕ್ಷಗಳು ನೇಮಿಸಿದ್ದ ಸ್ಟಾರ್ ಕ್ಯಾಂಪೇನರ್‌ಗಳು ವಿಶೇಷವಾಗಿ ಸಿನಿಮಾ ಹಾಗೂ ಟಿವಿ ತಾರೆಯರು ಭರ್ಜರಿ ಸಂಭಾವನೆಯೊಂದಿಗೆ ಮನೆಗೆ ಮರಳಿದ್ದಾರೆ.
ನಿಜ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಪ್ರಚಾರದ ಬಹುತೇಕ ಸ್ಥಳಗಳಿಗೆ ನಟ ಸುದೀಪ್‌ರನ್ನು (Actor Sudeep) ಕರೆದುಕೊಂಡು ಹೋಗಿದ್ದರು. ಕಳೆದ ಕೆಲವು ವಾರಗಳಿಂದ ಸುದೀಪ್ ಸ್ಟಾರ್ ಕ್ಯಾಂಪೇನರ್. ಈ ಕೆಲಸವನ್ನು ಅವರೇನು ಪುಕ್ಕಟೆ ಮಾಡಿಲ್ಲ. ಇಡೀ ಕ್ಯಾಂಪೇನ್‌ಗೆ ಅವರಿಗೆ ನಿಗದಿಯಾದ ಸಂಭಾವನೆ 20 ಕೋಟಿ ರುಪಾಯಿಯಂತೆ.
ನಾಲ್ಕು ಸಿನಿಮಾ ಸಂಭಾವನೆಯನ್ನು ಒಂದು ಚುನಾವಣೆಯಲ್ಲಿ ದುಡಿದುಬಿಟ್ಟರು ಅಂತ ಬಲ್ಲವರು ಮಾತಾಡಿಕೊಳ್ಳುತ್ತಿದ್ದಾರೆ.
ಇದೇ ರೀತಿ ಸಾಧು ಕೋಕಿಲ ಕಾಂಗ್ರೆಸ್ ಪ್ರಚಾರಕ್ಕೆ ಓಡಾಡಿದ್ದಾರೆ. ಅವರಿಗೆ ದಿನಕ್ಕೆ ಕನಿಷ್ಠ 5 ಲಕ್ಷ ರೂಪಾಯಿ ಸಂಭಾವನೆ ಸಂದಾಯವಾಗಿರಬಹುದು. ಈ ಸಲ ಟಿವಿ ಕಲಾವಿದರನ್ನೂ ಜನಾಕರ್ಷಣೆಗೆ ಕರೆಸಲಾಗಿತ್ತು. ಉದಯ ಟಿವಿಯ ಕೆಲವು ಪ್ರಮುಖ ಕಲಾವಿದರಿಗೆ ದಿನಕ್ಕೆ ೫೦ ಸಾವಿರ ರೂಪಾಯಿ ನೀಡಲಾಗಿದೆ ಎಂಬ ಮಾಹಿತಿ ಬಂದಿದೆ. (Actor Sudeep)
ಈಗಾಗಲೇ ಪಕ್ಷದಲ್ಲಿ ಮೊದಲಿನಿಂದ ಗುರುತಿಸಿಕೊಂಡಿರುವ ಕಲಾವಿದರಾದ ಭಾವನಾ, ಶ್ರುತಿ, ತಾರಾ, ಉಮಾಶ್ರೀ ಮುಂತಾದವರಿಗೆ ಸಂಭಾವನೆ ಇಲ್ಲ ಎಂದು ಹೇಳಲಾಗುತ್ತಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಅವರಿಗೆ ಯಾವುದಾದರೂ ಸ್ಥಾನಮಾನ ದೊರೆಯಬಹುದು. ತಾರಾ ಈಗಾಗಲೇ ಎಂಎಲ್ ಸಿ ಕೂಡ ಆಗಿದ್ದರು. ಶ್ರುತಿ ಒಮ್ಮೆ ಕಡಿಮೆ ಅವಧಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದರು. ಅದೇ ರೀತಿ ಶಶಿಕುಮಾರ್ ಹಾಗೂ ಜಗ್ಗೇಶ್ ಕೂಡ ಈಗಾಗಲೇ ರಾಜಕಾರಣಿಗಳೇ ಆಗಿರುವುದರಿಂದ ಅವರಿಗೆ ಪ್ರತ್ಯೇಕ ಸಂಭಾವನೆ ನೀಡಲಾಗಿಲ್ಲ ಎನ್ನಲಾಗುತ್ತಿದೆ. ಇನ್ನು ಗೀತಾ ಶಿವರಾಜ್ ಕುಮಾರ ಕಾಂಗ್ರೆಸ್ ಸೇರಿರುವುದರಿಂದ ಸಹಜವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಚಾರಕ್ಕೆ ಧುಮುಕಿದ್ದಾರೆ. ಆದರೆ ಅಪ್ಪ ಡಾ.ರಾಜ್‌ಕುಮಾರ್ ಎಷ್ಟೇ ಆಹ್ವಾನವಿತ್ತರೂ ಸ್ವತಃ ಬೀಗರಾದ ಬಂಗಾರಪ್ಪನವರ ಒತ್ತಾಯವಿದ್ದರೂ ರಾಜಕೀಯಕ್ಕೆ ಬರಲಿಲ್ಲ. ಈಗ ಮಗ ಶಿವಣ್ಣ ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿದಿದ್ದು ಸರಿ ಅನ್ನಿಸ್ತಿಲ್ಲ ಎಂಬುದು ಕೆಲವು ಅಭಿಮಾನಿಗಳ ಅಭಿಪ್ರಾಯ. (Actor Sudeep)
ಇನ್ನು ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಟ್ಟ ಅಭ್ಯರ್ಥಿಗಳೆಂದರೆ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಸಿಪಿ ಯೋಗೇಶ್ವರ್, ಬಿ.ಸಿ. ಪಾಟೀಲ್, ಮುನಿರತ್ನ, ಕುಮಾರಣ್ಣ, ನಿಖಿಲ್, ಉಮಾಪತಿ ಮುಂತಾದವರು. ಇವರಿಗೆ ಪ್ರತ್ಯೇಕ ಸಂಭಾವನೆ ಇಲ್ಲ! (Actor Sudeep)
Also read.
(Actor Sudeep)