ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯು 2022-23ನೇ ಸಾಲಿನ ಸರಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಪದವಿ ಕೋರ್ಸ್‌ಗಳಿಗೆ ಶುಲ್ಕ ನಿಗದಿ ಮಾಡಿದೆ. 2021-22ನೇ ಸಾಲಿನ ಶುಲ್ಕವನ್ನೇ ಮುಂದುವರಿಸುವಂತೆ ಸೂಚನೆ ನೀಡಿದೆ.
ಅರ್ಜಿ ಶುಲ್ಕ, ಪ್ರವೇಶ ಶುಲ್ಕ ಹಾಗೂ ವಿವಿಧ ಶುಲ್ಕಗಳನ್ನು ಸೇರಿಸಿ ಒಟ್ಟು 800 ರೂ. ಪಾವತಿಸಬೇಕು. ಜೊತೆಗೆ ಕ್ರೀಡಾ ಅಭಿವೃದ್ಧಿ, ಸಾಂಸ್ಕೃತಿಕ ಹೀಗೆ ಇನ್ನಿತರ ಶುಲ್ಕಗಳನ್ನು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕಾಲೇಜಿನ ಸಮಿತಿಯೇ ನಿರ್ಣಯಿಸತಕ್ಕದ್ದು ಎಂದು ಇಲಾಖೆ ತಿಳಿಸಿದೆ.
ಈ ಶುಲ್ಕವು ಪದವಿ ಕೋರ್ಸ್‌ಗಳಾದ ಬಿ.ಎ., ಬಿ.ಕಾಂ., ಬಿಬಿಎ, ಬಿಬಿಎಂ, ಬಿಸಿಎ, ಕಾನೂನು ಮತ್ತು ಚಿತ್ರಕಲಾ ಕೋರ್ಸ್‌ಗಳಿಗೆ ಅನ್ವಯಿಸಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
Previous Articleದೇಶದಲ್ಲಿ ಹೊಸದಾಗಿ 15,940 ಜನರಿಗೆ ಕೊರೋನಾ ಸೋಂಕು, 20 ಮಂದಿ ಸಾವು
Next Article ಕಲ್ಯಾಣಿಗೆ ಬಿದ್ದು ತಾಯಿ-ಮಗಳು ಸಾವು