ಬೆಂಗಳೂರು
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಹಲವಾರು ರೀತಿಯ ವಾಹನ ಸೌಕರ್ಯ ಇದೆ. ಆದರೆ ಇವುಗಳಲ್ಲಿ ಕ್ಯಾಬ್ ಸೇವೆ ಅತ್ಯಂತ ಜನಪ್ರಿಯ.
ನಗರದ ಯಾವುದೇ ಮೂಲೆಯಿಂದಾದರೂ ಕ್ಯಾಬ್ ಸೇವೆ ಪಡೆದುಕೊಂಡು ವಿಮಾನ ನಿಲ್ದಾಣ ತಲುಪಬಹುದು. ರಾಜ್ಯ ಸರ್ಕಾರದ ಕೆ ಎಸ್ ಟಿ ಡಿ ಸಿ ಜೊತೆಗೆ ಖಾಸಗಿಯ ಓಲಾ, ಉಬರ್, ನಮ್ಮ ಯಾತ್ರಿ, ಸೇರಿದಂತೆ ಹಲವಾರು ಖಾಸಗಿ ಕ್ಯಾಬ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಸೆಪ್ಟೆಂಬರ್ ನಿಂದ ಈ ಎಲ್ಲಾ ಕ್ಯಾಬ್ ಸೇವೆ ಅತ್ಯಂತ ದುಬಾರಿಯಾಗಲಿದೆ. ಇದಕ್ಕೆ ಕಾರಣ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಮತ್ತು ಖಾಸಗಿ ಕ್ಯಾಬ್ ಸಂಸ್ಥೆಗಳ ಒಪ್ಪಂದ ಕರಾರು ನವೀಕರಣ ವಾಗುತ್ತಿದ್ದು ಇದರಲ್ಲಿ ಶುಲ್ಕದ ಪ್ರಮಾಣ ಕೂಡ ಹೆಚ್ಚಳವಾಗಲಿದೆ.
ಹೀಗಾಗಿ ವಿಮಾನ ನಿಲ್ದಾಣಕ್ಕೆ ಖಾಸಗಿ ಕ್ಯಾಬ್ ಗಳ ಮೂಲಕ ಬರುವ ಪ್ರಯಾಣಿಕರು ಪ್ರಯಾಣ ದರದೊಂದಿಗೆ ಏರ್ಪೋರ್ಟ್ ಟ್ಯಾಕ್ಸ್, ಟೋಲ್, ಕಮಿಷನ್ ಮತ್ತು ವಿಮಾನ ನಿಲ್ದಾಣ ವಿಧಿಸುವ ಸೆಸ್ ಭರಿಸಬೇಕಾಗುತ್ತದೆ. ಹೀಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವ ವೆಚ್ಚ ದುಬಾರಿಯಾಗಲಿದೆ.