ಬೆಂಗಳೂರು,ಫೆ.12-
ದೇಶದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ (Aero India Show) ಗೆ ವೇದಿಕೆ ಸಜ್ಜುಗೊಂಡಿದೆ. ಯಲಹಂಕ ವಾಯುನೆಲೆಯಲ್ಲಿ (Yelahanka Airforce Base) ಲೋಹದ ಹಕ್ಕಿಗಳ ಕಸರತ್ತು ನೋಡುಗರ ಗಮನ ಸೆಳೆಯಲಿದೆ. ರಾಜಧಾನಿಯ ಹೊರವಲಯದ ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನ (Air Show) ದಲ್ಲಿAmerica, Britain, Italy, Israel, Japan ಸೇರಿದಂತೆ 20ಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳಲಿವೆ.
ವಿಮಾನಯಾನ ಒಳಗೊಂಡಂತೆ ರಕ್ಷಣಾ ಕ್ಷೇತ್ರದಲ್ಲಿ ಬಳಕೆಯಾಗುವ ಎಲ್ಲ ಹೊಸ ಉಪಕರಣ, ಆವಿಷ್ಕಾರ, ಸಂಶೋಧನೆಗಳ ಬಗ್ಗೆ ತಜ್ಞರು ಈ ವೇಳೆ ವಿಚಾರ ವಿನಿಮಯ, ಚಿಂತನ-ಮಂಥನ ನಡೆಸಲಿದ್ದಾರೆ. ಭಾರತೀಯ ವಾಯು ಪಡೆಯ ಹೆಮ್ಮೆಯ ಸೂರ್ಯ ಕಿರಣ್ (Surya Kiran), ಎಂಐ-17 (Mi–17), ತೇಜಸ್ ಯುದ್ಧ ವಿಮಾನ (Tejas fighter jet), ಹಾಕ್ (Hawk), ಸುಖೋಯ್ (Sukhoi), ಮಿಗ್ (MiG), ಜಾಗ್ವಾರ್ (Jaguar), ರೆಫೆಲ್ ವಿಮಾನಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ. ಇದರ ಜತೆಗೆ ಸೂಪರ್ ಸಾನಿಕ್ ಜೆಟ್ ವಿಮಾನ (supersonic aircraft) ಕಸರತ್ತು ಮಾಡಲು ಸಜ್ಜುಗೊಂಡಿವೆ.
ಏರೋ ಇಂಡಿಯಾ-2023 ಹಿನ್ನೆಲೆಯಲ್ಲಿ ಸೋಮವಾರ (ಫೆ.13) ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ಯಲಹಂಕ ವಾಯುನೆಲೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ (International Airport Road) ಗಳಲ್ಲಿ ಸಂಚಾರ ಮಾರ್ಗ ಬದಲಾವಣೆ, ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಭಾರಿ ವಾಹನಗಳ ಪ್ರವೇಶ ನಿರ್ಬಂಧಿಸಿದ್ದು, ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.