ಧಾರವಾಡ: ಉದ್ಯಮಿ ಹಾಗೂ ಬಿಜೆಪಿಯ ಹಿರಿಯ ನಾಯಕ
ಚಂದ್ರಕಾಂತ ಬೆಲ್ಲದ ಸತತವಾಗಿ ಆಯ್ಕೆಯಾಗುತ್ತಿದ್ದ
ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅವರ ರಾಜಕೀಯ ನಿವೃತ್ತಿಯಿಂದ ಅವರ ಪುತ್ರ ಅರವಿಂದ ಬೆಲ್ಲದ (Arvind Bellad) ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಅರವಿಂದ ಬೆಲ್ಲದ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಮತ್ತೆ ಕಣಕ್ಕಿಳಿದಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿಯ ಅರವಿಂದ ಬೆಲ್ಲದಗೆ ಬ್ರೇಕ್ (Arvind Bellad) ಹಾಕಲು ಕಾಂಗ್ರೆಸ್ ಈ ಬಾರಿ ತನ್ನ ಅಭ್ಯರ್ಥಿಯನ್ನು ಮತ್ತೆ ಬದಲಿಸಿದೆ. ಪಕ್ಷದ ಮಹಾನಗರ ಜಿಲ್ಲಾಧ್ಯಕ್ಷರನ್ನೇ ಜೆಡಿಎಸ್ ಕಣಕ್ಕಿಳಿಸಿದೆ. ಹೀಗಾಗಿ ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಕಣ ಕುತೂಹಲ ಕೆರಳಿಸಿದೆ.
ಮೋರೆ ಹಾಗೂ ಬೆಲ್ಲದ ಕುಟುಂಬದವರೇ ಕಳೆದ ನಾಲ್ಕು ದಶಕ ಗಳಿಂದ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.
ಕಾಂಗ್ರೆಸ್ ಈ ಬಾರಿ ಹಿರಿಯ ರಾಜಕಾರಣಿ, ಬ್ರಾಹ್ಮಣ ಸಮು ದಾಯದ ದೀಪಕ ಚಿಂಚೋರೆ ಅವರಿಗೆ ಟಿಕೆಟ್ ನೀಡಿದೆ. ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕೆಲ ಹಳ್ಳಿಗಳನ್ನೂ ಒಳಗೊಂಡಿರುವ ಹಾಗೂ ಹೆಚ್ಚಾಗಿ ನಗರ ಪ್ರದೇಶವೇ ಇರುವ ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಲಿಂಗಾಯತರು, ಮರಾಠ, ಬ್ರಾಹ್ಮಣ, ಹಿಂದುಳಿದ ಸಮುದಾಯ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ
ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಕ್ಷೇತ್ರದ ಅಭಿವೃದ್ಧಿ, ಯಾವುದೇ ರೀತಿಯ ಭ್ರಷ್ಟಾಚಾರ ಆರೋಪಗಳಿಗೆ ಅವಕಾಶ ನೀಡದಿರುವುದು,ಜನ ಸಾಮಾನ್ಯರು ಸುಲಭವಾಗಿ ಭೇಟಿಯಾಗಬಹುದು ಎಂಬ ಅಂಶ ಬೆಲ್ಲದ ಅವರಿಗೆ ಅನುಕೂಲಕರ ಅಂಶಗಳು
ಕ್ಷೇತ್ರದಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಬಡವರಿಗೆ ಅಪಾರ್ಟ್‌ಮೆಂಟ್ ಶೈಲಿಯ ಮನೆಗಳ ನಿರ್ಮಾಣ, ಕೆರೆಗಳ ಅಭಿವೃದ್ಧಿಯಂತಹ ಕಾಮಗಾರಿಗಳು ಜನಮೆಚ್ಚುಗೆಗೆ ಪಾತ್ರವಾಗಿವೆ. ಹೀಗಾಗಿ ಬೆಲ್ಲದ ಗೆಲುವು ನಿಶ್ವಿತ ಎನ್ನುವುದು ಬೆಂಬಲಿಗರ ಮಾತು. (Arvind Bellad)
Also read.