ಬೆಂಗಳೂರು ನಗರದ ಹೋಟೆಲ್ನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರೋಪದಡಿ ದಿ ಪಾರ್ಕ್ ಫೈವ್ಸ್ಟಾರ್ ಹೋಟೆಲ್ ಮೇಲೆ ಹಲಸೂರು ಪೋಲೀಸರು ದಾಳಿ ಮಾಡಿದ್ದಾರೆ. ಹಲಸೂರು ಜಿಟಿ ಮಾಲ್ ಬಳಿಯ ಪಾರ್ಕ್ ಹೋಟೆಲ್ನ ಪಾರ್ಟಿಯಲ್ಲಿ ಬಾಲಿವುಡ್ ನಟ ಭಾಗವಹಿಸಿರುವ ಶಂಕೆ ವ್ಯಕ್ತವಾಗಿದೆ. ಮುಂಬೈನ DJ ಟೀಂನ ಜತೆ ಪಾರ್ಟಿಗೆ ನಟ ಬಂದಿದ್ದ ಮಾಹಿತಿ ಲಭ್ಯವಾಗಿದೆ.
ರಾತ್ರಿ 12 ಗಂಟೆಗೆ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದು, ಹೋಟೆಲ್ನಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಲಾಗಿತ್ತು .
ಹಲಸೂರು ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ 25ಕ್ಕೂ ಅಧಿಕ ಪೊಲೀಸರಿಂದ ಹೋಟೆಲ್ ಮೇಲೆ ದಾಳಿ ಮಾಡಲಾಗಿದೆ. 50ಕ್ಕೂ ಹೆಚ್ಚು ಯುವಕ-ಯುವತಿಯರು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ಮೆಡಿಕಲ್ ಟೆಸ್ಟ್ನಲ್ಲಿ ಡ್ರಗ್ಸ್ ಸೇವಿಸಿರುವುದು ದೃಢ ಪಟ್ಟಿದೆ.ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,.