ಬೆಂಗಳೂರು,ಜ.24-
ಸಿಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶವೆಂದರೆ ಅದು ಕೆ.ಆರ್.ಮಾರ್ಕೆಟ್. ಇಲ್ಲಿನ ಮೇಲ್ಸೇತುವೆ ಮೇಲಿಂದ ಏಕಾಏಕಿ 10 ರೂಪಾಯಿಯ ನೋಟುಗಳ ಸುರಿಮಳೆಯಾಗಿದೆ. ಸೂಟು ಬೂಟು ಧರಿಸಿ, ಕೊರಳಿಗೆ ಗಡಿಯಾರವೊಂದನ್ನು ನೇತು ಹಾಕಿಕೊಂಡು, ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿ, 10 ರೂಪಾಯಿಯ ನೋಟುಗಳನ್ನು ಫ್ಲೈಓವರ್ ನ ಎರಡೂ ಭಾಗಗಳಲ್ಲಿ ಎಸೆದು ಹೋಗಿದ್ದಾನೆ.
ಮೇಲಿಂದ ಹಣ ಬೀಳುತ್ತಿದ್ದಂತೆ ಕೆಲವರು ಅದನ್ನು ಎತ್ತಿಕೊಳ್ಳಲು ಮುಗಿಬಿದಿದ್ದಾರೆ. ಫ್ಲೈಓವರ್ ಮೇಲಿಂದ ಹಣದ ಮಳೆಯಾಗುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತನಿಖೆಗಿಳಿದ ಪೊಲೀಸರು ಇದರ ನಿಜವಾದ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಜೊತೆ ಆ್ಯ೦ಕರಿಂಗ್ ಕೂಡ ಮಾಡುತ್ತಿದ್ದ ಯುವಕ ಜೀವನದಲ್ಲಿ ಜಿಗುಪ್ಸೆಯಿಂದ ಫ್ಲೈಓವರ್ ಮೇಲಿಂದ ಹತ್ತು ರೂಗಳ ನೋಟುಗಳನ್ನು ಚೆಲ್ಲಿ ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಾಗರಬಾವಿಯಲ್ಲಿ ಯೂಟ್ಯೂಬ್ ಚಾನಲ್ ನಡೆಸುತ್ತಿರುವ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ.