Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2023
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬ್ಯಾಂಕ್ ಗ್ರಾಹಕರ Data ಅಪಾಯದಲ್ಲಿ
    ಅಪರಾಧ

    ಬ್ಯಾಂಕ್ ಗ್ರಾಹಕರ Data ಅಪಾಯದಲ್ಲಿ

    vartha chakraBy vartha chakraಅಕ್ಟೋಬರ್ 30, 2022Updated:ಅಕ್ಟೋಬರ್ 30, 2022ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ನವದೆಹಲಿ,ಅ.30- ಡ್ರಿಲಿಂಕ್ ಕುತಂತ್ರಾಂಶದ ಸುಧಾರಿತ ಅಥವಾ ಅಪ್​ಗ್ರೇಡೆಡ್ ವರ್ಷನ್ ದಾಳಿಯಿಂದಾಗಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶಗಳು ಅಪಾಯದಲ್ಲಿವೆ. ವಿಶ್ಲೇಷಕರ ಪ್ರಕಾರ, ಮಾಲ್​ವೇರ್ ಸದ್ಯ ಆ್ಯಂಡ್ರಾಯ್ಡ್ ಟ್ರೋಜನ್ ಆಗಿ ಪರಿವರ್ತನೆಗೊಂಡಿದ್ದು, ಮಹತ್ವದ ವೈಯಕ್ತಿ ವಿಚಾರಗಳು ಹಾಗೂ ಬ್ಯಾಂಕಿಂಗ್ ದತ್ತಾಂಶಕ್ಕೆ ಕನ್ನ ಹಾಕುವ ಸಾಧ್ಯತೆ ಇದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.
    ಡ್ರಿಲಿಂಕ್ ಕುತಂತ್ರಾಂಶ ಅಥವಾ ಮಾಲ್​ವೇರ್ 2016ರಲ್ಲೇ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಟಕೊಟ್ಟಿತ್ತು. ಆಗ ಎಸ್​ಎಂಎಸ್​ಗಳ ಮೂಲಕ ಗ್ರಾಹಕರ ದತ್ತಾಂಶ ಕದಿಯುತ್ತಿದ್ದ ಮಾಲ್​ವೇರ್ ಈಗ ಇನ್ನಷ್ಟು ಸುಧಾರಿತಗೊಂಡು ಮರಳಿದೆ.
    ಪ್ರಸ್ತುತ ಸ್ಕ್ರೀನ್​ ರೆಕಾರ್ಡಿಂಗ್, ಕೀಲಾಗಿಂಗ್, ಆಕ್ಸೆಸಿಬಿಲಿಟಿ ಸೇವೆಗಳ ದುರಪಯೋಗ, ಓವರ್​ಲೇ ದಾಳಿಗಳನ್ನು ನಡೆಸುವ ಸಾಮರ್ಥ್ಯ ಒಳಗೊಂಡಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
    ಮಾಧ್ಯಮ ವರದಿಗಳ ಪ್ರಕಾರ, ಡ್ರಿಲಿಂಕ್ ಮಾಲ್​ವೇರ್​ನ ಇತ್ತೀಚಿನ ಸುಧಾರಿತ ವರ್ಷನ್ ಎಪಿಕೆ ಹೆಸರಿನ ಐಅಸಿಸ್ಟ್ ಮೂಲಕ ಗ್ರಾಹಕರನ್ನು ಗುರಿಯಾಗಿಸುತ್ತದೆ. ಐಅಸಿಸ್ಟ್ ಎಂಬುದು ಭಾರತೀಯ ತೆರಿಗೆ ಇಲಾಖೆಯ ಅಧಿಕೃತ ತೆರಿಗೆ ನಿರ್ವಹಣಾ ಟೂಲ್ ಆಗಿದೆ. ಒಮ್ಮೆ ಮಾಲ್​ವೇರ್ ಬಾಧಿತ ಐಅಸಿಸ್ಟ್ ಇನ್​ಸ್ಟಾಲ್ ಮಾಡಿದರೆ, ಅದು ಎಸ್​ಎಂಎಸ್​ಗಳನ್ನು ಕಳುಹಿಸುವ, ಓದುವ ಅನುಮತಿ ಕೇಳುತ್ತದೆ. ಎಕ್ಸ್​​ಟರ್ನಲ್ ಸ್ಟೋರೇಜ್ ಅನ್ನು ಓದುವ ಅನುಮತಿಯನ್ನೂ ಕೇಳುತ್ತದೆ. ಇತರ ಬ್ಯಾಂಕಿಂಗ್ ಟ್ರೋಜನ್​ಗಳಂತೆ ಡ್ರಿಲಿಂಕ್ ಕೂಡ ಸರ್ವೀಸ್ ಆಕ್ಸೆಸಿಬಿಲಿಟಿ ಆಧಾರದಲ್ಲೇ ದಾಳಿ ನಡೆಸುತ್ತದೆ. ಒಮ್ಮೆ ಸಂತ್ರಸ್ತರು ಎಲ್ಲದಕ್ಕೂ ಅನುಮತಿಸಿದ ಬಳಿಕ ಗೂಗಲ್ ಪ್ಲೇ ಪ್ರೊಟೆಕ್ಟ್ ಅನ್ನು ಡಿಸೇಬಲ್ ಮಾಡುತ್ತದೆ. ನಂತರ ತನ್ನ ಕಾರ್ಯಾಚರಣೆ ಶುರುಮಾಡುತ್ತದೆ.
    ನಂತರ ನಕಲಿ ಪೇಜ್​ಗಳನ್ನು ತೆರೆಯುವ ಬದಲು ಭಾರತೀಯ ಆದಾಯ ತೆರಿಗೆ ಇಲಾಖೆಯ ನೈಜ ಸೈಟ್​ ಅನ್ನು ಲೋಡ್ ಆಗುವಂತೆ ಮಾಡುತ್ತದೆ. ಲಾಗಿನ್ ಪೇಜ್​ ಅನ್ನು ತೋರಿಸುವ ಮೊದಲು ಮಾಲ್​ವೇರ್, ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅಥೆಂಟಿಕೇಷನ್ ಸ್ಕ್ರೀನ್​ ಅನ್ನು ಡಿಸ್​ಪ್ಲೇ ಮಾಡುತ್ತದೆ. ಸಂತ್ರಸ್ತರು ಪಿನ್ ಎಂಟರ್ ಮಾಡಿದ ಕೂಡಲೇ ಮಾಲ್​ವೇರ್, ಮೀಡಿಯಾ ಪ್ರೊಜೆಕ್ಷನ್ ಬಳಸಿಕೊಂಡು ಸ್ಕ್ರೀನ್​ರೆಕಾರ್ಡಿಂಗ್ ಮೂಲಕ ಬಯೋಮೆಟ್ರಿಕ್ ಪಿನ್ ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಜತೆಗೆ ಕೀಸ್ಟ್ರೋಕ್​ಗಳನ್ನೂ ಸಂಗ್ರಹಿಸುತ್ತದೆ. ನಂಗತರ ಕದ್ದ ಮಾಹಿತಿಯನ್ನು ಸಿಆಂಡ್ ಸಿ ಸರ್ವರ್​ಗೆ ಕಳುಹಿಸುತ್ತದೆ.

    Share. Facebook Twitter Pinterest LinkedIn Tumblr Email
    Previous Articleಮಸ್ಕ್ ಒಳಗೆ ಪರಾಗ್ ಹೊರಕ್ಕೆ
    Next Article BJPಯ ಹೊಸ ಅಜೆಂಡಾ ಜಾರಿಗೆ ಸಿದ್ದತೆ
    vartha chakra
    • Website

    Related Posts

    ತೆರಿಗೆ ವಂಚಕರ ಚಳಿ ಬಿಡಿಸಿದ IT Raid

    ಅಕ್ಟೋಬರ್ 4, 2023

    ಸಂಕಷ್ಟಕ್ಕೆ ಸಿಲುಕಿದ ಸ್ಯಾಂಡಲ್ ವುಡ್ ನಟ | Nagabhushana

    ಅಕ್ಟೋಬರ್ 3, 2023

    ಪುಂಡಾಟದಿಂದ ನಲುಗಿದ ಶಿವಮೊಗ್ಗ | Shimoga

    ಅಕ್ಟೋಬರ್ 2, 2023

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದವರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ | DK Shivakumar

    ತೆರಿಗೆ ವಂಚಕರ ಚಳಿ ಬಿಡಿಸಿದ IT Raid

    BMTC ಗೆ 17 ಕೋಟಿ ನಾಮ ಹಾಕಿದ ಅಧಿಕಾರಿಗಳು

    ಜಾತಿ ಜನಗಣತಿ ಬಹಿರಂಗ ಯಾಕಿಲ್ಲ? | Karnataka Caste Census

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • canada pharmacy online no script ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • giant discount pharmacy ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • prednisone mexican pharmacy ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    Latest Kannada News

    ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದವರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ | DK Shivakumar

    ಅಕ್ಟೋಬರ್ 4, 2023

    ತೆರಿಗೆ ವಂಚಕರ ಚಳಿ ಬಿಡಿಸಿದ IT Raid

    ಅಕ್ಟೋಬರ್ 4, 2023

    BMTC ಗೆ 17 ಕೋಟಿ ನಾಮ ಹಾಕಿದ ಅಧಿಕಾರಿಗಳು

    ಅಕ್ಟೋಬರ್ 4, 2023
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2023
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
    Subscribe