Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಿ.ಬಿ.ಎಂ.ಪಿ ಆಸ್ತಿ ತೆರಿಗೆ ಬಾಕಿದಾರರಿಗೆ OTS ಪಾವತಿ ಅವಧಿ, ನ-30ಕ್ಕೆ ಕೊನೆ. 
    ಬೆಂಗಳೂರು

    ಬಿ.ಬಿ.ಎಂ.ಪಿ ಆಸ್ತಿ ತೆರಿಗೆ ಬಾಕಿದಾರರಿಗೆ OTS ಪಾವತಿ ಅವಧಿ, ನ-30ಕ್ಕೆ ಕೊನೆ. 

    vartha chakraBy vartha chakraಅಕ್ಟೋಬರ್ 14, 202452 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ (Property Tax) ಬಾಕಿ ಉಳಿಸಿಕೊಂಡವರಿಗೆ ಅಥವಾ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿ ಕಡಿಮೆ ತೆರಿಗೆ ಪಾವತಿಸಿದ ಮಾಲೀಕರಿಗೆ ವಿಧಿಸಲಾಗುತ್ತಿದ್ದ ಎರಡು ಪಟ್ಟು ದಂಡದ ಮೊತ್ತವನ್ನು ಶೇ.50ಕ್ಕೆ ಇಳಿಕೆ ಮಾಡಿದ್ದು, ಇದನ್ನು ಪಾವತಿಸಲು ರಾಜ್ಯ ಸರ್ಕಾರ ಒನ್ ಟೈಮ್ ಸೆಟ್ಲ್ಮೆಂಟ್ (OTS) ಜಾರಿ ಮಾಡಿದೆ. ಇದರಿಂದ ಪಾವತಿದಾರ ಪೂರ್ಣ ಹಣವನ್ನು ಪಾವತಿಸುವ ಬದಲು ಶೇ.50% ಕಡಿಮೆ ಹಣವನ್ನು ಪಾವತಿಸಬಹುದು.

    ಫೆಬ್ರವರಿ,2024ರಲ್ಲಿ ಮೊದಲ ಬಾರಿಗೆ ಓಟಿಎಸ್ ಪ್ರಾರಂಭಿಸಿದ ಬಿ.ಬಿ.ಎಂ.ಪಿ, ಜುಲೈವರೆಗೆ ಓಟಿಎಸ್ ಪಾವತಿಗೆ ಅವಕಾಶ ನೀಡಲಾಗಿತ್ತು. ನಂತರ ಯೋಜನೆಯನ್ನು ಮೊದಲ ಬಾರಿಗೆ ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಯಿತು. ಇದೀಗ ಪುನಃ ನವೆಂಬರ್ 30ರ ವರೆಗೆ ಈ ಸಮಯವನ್ನು ವಿಸ್ತರಿಸಲಾಗಿದೆ.

    ಪ್ರಕ್ರಿಯೆ ಹೇಗಿರುತ್ತದೆ?

    • ಆಸ್ತಿ ಮಾಲೀಕರು OTP ಬಳಸಿಕೊಂಡು ತಮ್ಮ ಮೊಬೈಲ್‌ ಮೂಲಕ ಬಿಬಿಎಂಪಿ ಆಸ್ತಿ ತೆರಿಗೆಯ ಸ್ವಯಂ ಮೌಲ್ಯಮಾಪನ ವ್ಯವಸ್ಥೆ (SAS)ಗೆ ಲಾಗ್‌ ಇನ್‌ ಆಗಬೇಕು.
    • ಅದರಲ್ಲಿ ಮಾರಾಟದ ಕರಾರು ಪತ್ರ ಅಥವಾ ವರ್ಗಾವಣೆ ಪತ್ರದ ಸಂಖ್ಯೆಯನ್ನು ನಮೂದಿಸಬೇಕು.
    • ಅದರ ಆಧಾರದ ಮೇಲೆ ಕಾವೇರಿ-2 ತಂತ್ರಾಂಶದಿಂದ ಆಸ್ತಿ ಮತ್ತು ಅದರ ಮಾಲೀಕರ ವಿವರವಿರುವ ಪ್ರಮಾಣ ಪತ್ರ ಒದಗಿಸಲಾಗುತ್ತದೆ.
    • ಅನಂತರ ಆಸ್ತಿಯ ಚಿತ್ರ, ಅದರ ಜಿಪಿಎಸ್‌ ಇರುವ ವಿಳಾಸದ ಸಂಪೂರ್ಣ ವಿವರ ದಾಖಲಿಸಬೇಕು.
    • ನಂತರ ಮಾಲೀಕರ ವಿವರವನ್ನು ಅಥವಾ ದಾಖಲೆಗಳನ್ನು ಕಾವೇರಿ-2 ತಂತ್ರಾಂಶದಲ್ಲಿ ಪರಿಶೀಲನೆ ಮಾಡಲಾಗುತ್ತದೆ.
    • ಅಸ್ತಿ ಮಾಲೀಕರು ನೀಡಿರುವ ದಾಖಲೆಗಳು ಸರಿ ಇದ್ದಾಗ ಮಾತ್ರ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ. ದಾಖಲೆಗಳು ತಪ್ಪಾಗಿದ್ದಲ್ಲಿ ತೆರಿಗೆ ಪಾವತಿಸಲು ಸಾದ್ಯವಾಗುವುದಿಲ್ಲ. ಆದ್ದರಿಂದ ಅಸ್ತಿ ಮಾಲೀಕರು ನೀಡುವ ದಾಖಲೆಗಳನ್ನು ಪರಿಶೀಲಿಸಲು ಸಂಬಂಧ ಪಟ್ಟ ಕಂದಾಯ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.ಈ ದಾಖಲೆಗಳು ದೃಢೀಕರಿಸಲ್ಪಟ್ಟ ನಂತರ ಬಿಬಿಎಂಪಿಯ ಎಸ್‌ಎಎಸ್‌ ಅಡಿಯಲ್ಲಿ ಅವರಿಗೆ ಆಸ್ತಿ ಗುರುತಿನ ಸಂಖ್ಯೆ ನೀಡಲಾಗುತ್ತದೆ.
    • ಆಸ್ತಿ ಗುರುತಿನ ಸಂಖ್ಯೆಯಡಿ ಫಾರ್ಮ್-3ರಲ್ಲಿ ಆಸ್ತಿ ಬಳಕೆಯ ವಿವರಗಳನ್ನು ನಮೂದಿಸಿ, ಒಟಿಎಸ್‌ ಅಡಿ ಅನ್ವಯವಾಗುವಂತೆ ಆಸ್ತಿ ತೆರಿಗೆಗೆ ಖಾತವನ್ನು ಪಡೆಯಲು ಅರ್ಜಿ ಸಲ್ಲಿಸಬೇಕು
    • ಅನಂತರ ಖಾತಗಾಗಿ ಸಲ್ಲಿಸುವ ದಾಖಲೆಗಳನ್ನು 90 ದಿನಗಳೊಳಗೆ ಪರಿಶೀಲಿಸಿ, ಎ ಅಥವಾ ಬಿ ಖಾತ ಒದಗಿಸುವ ಬಗ್ಗೆ ಅಧಿಕಾರಿಗಳು ನಿರ್ಣಯ ತೆಗೆದುಕೊಳ್ಳುತ್ತಾರೆ.

    ಕರ್ನಾಟಕದಲ್ಲಿ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ?

    • ದಾಖಲೆಗಳು – ಖಾತಾ ಪ್ರಮಾಣಪತ್ರ, ಕೊನೆಯದಾಗಿ ಕಟ್ಟಿದ ಅಸ್ತಿ ತೆರಿಗೆ ರಶೀದಿ, ಆಸ್ತಿ ಗುರುತಿನ ಸಂಖ್ಯೆ((PID) ಇದನ್ನು ನಿಮ್ಮ ಖಾತಾ ಪ್ರಮಾಣಪತ್ರದಲ್ಲಿ ಕಾಣಬಹುದು.)
    • BBMP ಯ ಅಧಿಕೃತ ವೆಬ್‌ಸೈಟ್‌ https://bbmptax.karnataka.gov.in/ ಗೆ ಭೇಟಿ ನೀಡಿ
    • ‘ನಿಮ್ಮ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ‘ಆಸ್ತಿ ತೆರಿಗೆ ವರ್ಷ (ಮೌಲ್ಯಮಾಪನ ವರ್ಷ)’ ಅನ್ನು ಆಯ್ಕೆ ಮಾಡಿ’
    • ನಿಮ್ಮ ಆಸ್ತಿ ಗುರುತಿನ ಸಂಖ್ಯೆ (PID) ಅಥವಾ ಖಾತಾ ಸಂಖ್ಯೆಯನ್ನು ನಮೂದಿಸಿ ನಂತರ ಕ್ಲಿಕ್ ಮಾಡಬೇಕು.
    • ಸಿಸ್ಟಮ್ ನಿಮ್ಮ ಆಸ್ತಿ ವಿವರಗಳನ್ನು ಪ್ರದರ್ಶಿಸುತ್ತದೆ ನಂತರ ‘ತೆರಿಗೆ ಪಾವತಿಸಿ’ ಮೇಲೆ ಕ್ಲಿಕ್ ಮಾಡಿ
    • ಪಾವತಿ ಮೋಡ್ (ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ UPI) ಆಯ್ಕೆಮಾಡಿ ಮತ್ತು ಪಾವತಿ ಮಾಡಿ.
    • ಪಾವತಿ ಯಶಸ್ವಿಯಾದರೆ , ನೀವು ವಹಿವಾಟು ID ಯೊಂದಿಗೆ ದೃಢೀಕರಣ ಸಂದೇಶವನ್ನು ಮತ್ತು ರಶೀದಿಯನ್ನು ಪಡೆಯುತ್ತೀರಿ.

    Bangalore bbmp Congress Government Karnataka m OTS scheme property tax UPI ಕರ್ನಾಟಕ ಕಾಂಗ್ರೆಸ್ ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಬಿಗ್ಬಾಸ್ ನಿರೂಪಣೆಗೆ ಕಿಚ್ಚನಿಂದ ವಿದಾಯ, ನಟ ಸುದೀಪ್ ರವರಿಂದ ಅಧಿಕೃತ ಘೋಷಣೆ!
    Next Article ರಾಜ್ಯಪಾಲರ ಭದ್ರತೆ ಹೇಗಿದೆ ಗೊತ್ತಾ.
    vartha chakra
    • Website

    Related Posts

    ಎಚ್ಚೆತ್ತ ರಾಜ್ಯ ಸರ್ಕಾರ

    ಡಿಸೆಂಬರ್ 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಡಿಸೆಂಬರ್ 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಡಿಸೆಂಬರ್ 12, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಚ್ಚೆತ್ತ ರಾಜ್ಯ ಸರ್ಕಾರ

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • kypit kyrsovyu_hsOl ರಲ್ಲಿ ಲಂಚ ಆರೋಪದ ಸುಳಿಯಲ್ಲಿ Pralhad Joshi
    • playboy888_yxOn ರಲ್ಲಿ ಮೋದಿ ಹೆಸರಲ್ಲಿ ದುಡ್ಡು‌ ಬಂದಿದೆ ಎಂದರೆ ನಂಬಬೇಡಿ | Modi
    • https://seogift.ru/news/press-release/2530-luchshie-seo-studii-moskvy-reyting-2025-top-kompaniy-dlya-prodvizheniya-saytov/ ರಲ್ಲಿ ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    Latest Kannada News

    ಎಚ್ಚೆತ್ತ ರಾಜ್ಯ ಸರ್ಕಾರ

    ಡಿಸೆಂಬರ್ 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಡಿಸೆಂಬರ್ 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಡಿಸೆಂಬರ್ 12, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಿಎಂ ವಿಮಾನಯಾನ ಬಳಕೆಗೆ 47 ಕೋಟಿ ಖರ್ಚು #varthachakra #siddaramaiah #helicopter #airtravel #costs #news
    Subscribe