ಬೆಂಗಳೂರು,ಆ.28-ಪ್ರತ್ಯೇಕ ಧೂಮಪಾನ ವಲಯ ನಿರ್ಮಾಣ ಮಾಡದ ಪಬ್, ಕ್ಲಬ್, ರೆಸ್ಟೋರೆಂಟ್ ಪರವಾನಗಿ ರದ್ದು ಮಾಡಲು ಬಿಬಿಎಂಪಿ ಮುಂದಾಗಿದೆ.
ಬಿಬಿಎಂಪಿ ಅಧಿಕಾರಿಗಳು ಕಳೆದ 15 ದಿನಗಳ ಹಿಂದೆ ಸುಮಾರು 300ಕ್ಕೂ ಹೆಚ್ಚು ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳಿಗೆ ಧೂಮಪಾನ ವಲಯ(ಸ್ಮೋಕಿಂಗ್ ಝೋನ್) ನಿರ್ಮಾಣ ಮಾಡುವಂತೆ ನೋಟಿಸ್ ಜಾರಿ ಮಾಡಿ ಸೂಚನೆ ನೀಡಿತ್ತು.
ನೋಟಿಸ್ ಜಾರಿ ಮಾಡಿದರೂ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳು ಸರಿಪಡಿಸಿಕೊಂಡಿಲ್ಲ ಎಂಬ ಮಾಹಿತಿ ಬಿಬಿಎಂಪಿ ಪರಿಶೀಲನೆ ವೇಳೆ ಗೊತ್ತಾಗಿದೆ. ಹೀಗಾಗಿ ಅಂತಹ ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳಿಗೆ ಬಿಸಿ ಮುಟ್ಟಿಸಲು ಪಾಲಿಕೆ ಮುಂದಾಗಿದೆ. ಬಿಬಿಎಂಪಿ ಮುಂದಿನ ವಾರ ನೋಟಿಸ್ ನೀಡಿದ್ದ ಸ್ಥಳಗಳನ್ನು ಪರಿಶೀಲನೆ ನಡೆಸಲಿದೆ. ಪರಿಶೀಲನೆ ನಡೆಸಿ ನೋಟಿಸ್ ಕೊಟ್ಟ ಮೇಲೂ ಸ್ಮೋಕಿಂಗ್ ಝೋನ್ ಅಳವಡಿಸಿಕೊಂಡಿಲ್ಲ ಎಂಬುದು ಕಂಡು ಬಂದರೆ ಪರವಾನಗಿ ರದ್ದು ಮಾಡಲಿದ್ದಾರೆ.
ಬೆಂಗಳೂರಿನಲ್ಲಿರುವ ಎಲ್ಲಾ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳು ನಿಯಮಾನುಸಾರ ಕ್ರಮವಹಿಸಬೇಕು. ಸ್ಮೋಕಿಂಗ್ ಝೋನ್ ಕಡ್ಡಾಯ ಇರಲೇಬೇಕು. ಇಲ್ಲದೇ ಹೋದರೆ ಕೇಸ್ ಹಾಕಿ ಪರವಾನಗಿ ರದ್ದು ಮಾಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
Previous Articleಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್
Next Article SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?