ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನ ಹೃದಯಭಾಗದಲ್ಲಿರುವ ಕಟ್ಟಡವೊಂದರ ಕೊಠಡಿಯಿಂದ ಗುರುವಾರ ಹಣದ ಮಳೆ
ಸುರಿದಿದೆ. ಕಟ್ಟಡದ ಮೇಲಿಂದ ಹಣ ಬೀಳುವುದನ್ನು ಕಂಡ ಜನ ಹಣ ಹೆಕ್ಕಲು ಮುಗಿಬಿದ್ದಿದ್ದರಿಂದ ಕೆಲಕಾಲ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ನಿಜಗುಟ್ಟು ಏನೆಂದರೆ ಬಿ.ಸಿ.ರೋಡ್‌ನ ಕಟ್ಟಡದಲ್ಲಿ – ನಡೆಯುತ್ತಿದ್ದ ರಿಕ್ರಿಯೇಶನ್ ಕ್ಲಬ್‌ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆ ಸಹಾಯಕ ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು ಪೊಲೀಸ್ ನಿರೀಕ್ಷಕ ವಿವೇಕಾನಂದ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.
28 ಆರೋಪಿಗಳು ಅಕ್ರಮ ಜೂಜಾಟದಲ್ಲಿ ತೊಡಗಿದ್ದರು. ಪೊಲೀಸ್ ದಾಳಿಯಿಂದ ಆತಂಕಕ್ಕೊಳಗಾದ ಕೆಲವರು ಕಿಟಕಿಗಳ ಮೂಲಕ ನೋಟುಗಳನ್ನು ಕೆಳಗೆ ಎಸೆದಿದ್ದು, ನೋಟುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಟ್ಟಡದ ಮೇಲಿಂದ ಹಣ ಬೀಳುವುದನ್ನು ಕಂಡ ಜನ ನೋಟುಗಳನ್ನು ಆಯ್ದುಕೊಳ್ಳಲು ನಾ ಮುಂದು ತಾ ಮುಂದು ಎಂಬಂತೆ ಮುಗಿಬಿದ್ದಿದ್ದರು. ಅತ್ತ ಪೊಲೀಸರು ಆರೋಪಿಗಳನ್ನು ಬಂಧಿಸಿ 26,900 ರೂ. ವಶಕ್ಕೆ ಪಡೆದಿದ್ದಾರೆ. ಹಣ ಹೆಕ್ಕಿಕೊಂಡ ಕೆಲವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರೋರ್ವರ ಸಹೋದರನಿಗೆ ಸೇರಿದ ರಿಕ್ರಿಯೇಷನ್ ಕ್ಲಬ್ ಎಂದು ತಿಳಿದುಬಂದಿದೆ.
ಬಿ.ಸಿ ರೋಡ್ ಕಟ್ಟಡದಿಂದ ಸುರಿದ ಹಣದ ಮಳೆ, ಹೆಕ್ಕಿಕೊಳ್ಳಲು ನೂಕುನುಗ್ಗಲು!
Previous Articleಗೃಹ ಬಳಕೆಯ ಅಡಿಗೆ ಅನಿಲಕ್ಕಿಲ್ಲ ಸಬ್ಸಿಡಿ: ಕೇಂದ್ರ ಸರ್ಕಾರ ಘೋಷಣೆ
Next Article ಅಳು ನಿಲ್ಲಿಸದ ತನ್ನಿಬ್ಬರು ಮಕ್ಕಳನ್ನೇ ಕೊಂದ ತಾಯಿ!