Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Bing ಮತ್ತು Edge ನಲ್ಲಿ ChatGPT!
    ತಂತ್ರಜ್ಞಾನ

    Bing ಮತ್ತು Edge ನಲ್ಲಿ ChatGPT!

    vartha chakraBy vartha chakraಫೆಬ್ರವರಿ 9, 20231 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    Picture Credit – FORBES

     

    ಇದು Artificial Intelligence ಜಮಾನಾ. ಇಡೀ ವಿಶ್ವದ ಪ್ರತಿ ವಿಷಯವೂ ಅಂಗೈ ಬೆರಳ ತುದಿಯಲ್ಲಿಯೇ ಲಭ್ಯವಿರುವ instant ಯುಗ. LKG ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರೂ ತಮಗೆ ಬೇಕಾದ ಮಾಹಿತಿಯನ್ನು ಪಡೆಯಲು ಅಂತರ್ಜಾಲದ search engine ಗಳ ಮೊರೆ ಹೋಗುತ್ತಾರೆ. ಕೇಳಿದ್ದನ್ನೆಲ್ಲ ಕೊಡುವ search engine ಬಳಕೆಯ ಅನುಭವವನ್ನು ಮತ್ತಷ್ಟು ಸುಲಭವಾಗಿಸಲು ಕಳೆದ November ನಲ್ಲಿ Open AI ಎನ್ನುವ ಕಂಪನಿ “ChatGPT” ಎಂಬ chatbot ಅನ್ನು ವಿಶ್ವಕ್ಕೆ ಪರಿಚಯಿಸಿತು. ಇದಕ್ಕೆ ಬಂಡವಾಳ ಹೂಡಿದ್ದು “Microsoft”. ಮೊದಲ ದಿನದಿಂದಲೇ ಭಾರಿ ಸಂಚಲನವನ್ನು ಮೂಡಿಸಿದೆ ಈ ChatGPT.

    ಏನಿದು ChatGPT (Chat Generative Pre-trained Transformer)?

    ಹೆಸರೇ ಹೇಳುವಂತೆ ಇದರೊಂದಿಗೆ ನಾವು ಸಹಜ ಮತ್ತು ಸರಳವಾದ ಭಾಷೆಯಲ್ಲಿ chat ಮಾಡುತ್ತಾ, ಬೇಕಾದ ವಿಷಗಳನ್ನು ತಿಳಿದುಕೊಳ್ಳಬಹುದು.

    ನಾವು ಕೇಳಿದ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕನಾದ ಮತ್ತು ಸ್ಪಷ್ಟವಾದ ಉತ್ತರವನ್ನು ಅದು ನೀಡುತ್ತದೆ.

    ಒಂದು ವೇಳೆ, ಆ ಉತ್ತರ ನಮಗೆ ಸರಿ ಎನಿಸಿಲ್ಲದಿದ್ದರೆ ಅದೇ ಉತ್ತರವನ್ನು ಮತ್ತೊಂದು ಬಗೆಯಲ್ಲಿ ತಿಳಿಸುತ್ತದೆ.

     

    ಈಗಿರುವ search engine ಗಳಿಗೂ ChatGPT ಗೂ ಇರುವ ವ್ಯತ್ಯಾಸವೇನು? 

    ಈಗಿರುವ search engine ಗಳಲ್ಲಿ ನಮಗೆ ಬೇಕಾದ ವಿಷಯವನ್ನು ಹೇಳಿದಾಗ, ಅದು ನಾವು ಹೇಳಿದ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇರುವ ಹಲವು website ಗಳನ್ನು ತೋರಿಸುತ್ತದೆ. ನಾವು ಪ್ರತಿ website ಗೂ ಹೋಗಿ ನಮಗೆ ಬೇಕಾದ ಸಮರ್ಪಕ ಮಾಹಿತಿಯನ್ನು ಹುಡುಕಿಕೊಳ್ಳಬೇಕು.

    ಆದರೆ, ChatGPT ಹಾಗಲ್ಲ. ನಮ್ಮ ನೇರ ಪ್ರಶ್ನೆಗೆ ಅದು ನೇರ ಉತ್ತರವನ್ನು ನೀಡುತ್ತದೆ.

    ಉದಾಹರಣೆಗೆ – ಪ್ರಜಾಪ್ರಭುತ್ವದ ಮೇಲೆ ನಿಮಗೊಂದು ಪ್ರಬಂಧ ಬರೆಯಬೇಕು. search engine ನಲ್ಲಿ ಹುಡುಕಿದಾಗ, ಪ್ರಜಾಪ್ರಭುತ್ವಕ್ಕೆ ಸಂಬಂಧಿತ ವಿಷಯಗಳಿರುವ ಹಲವು website ಗಳನ್ನು ಅದು ನೀಡುತ್ತದೆ. ಅದರಲ್ಲಿ ನಾವು ಒಂದೊಂದೇ website ಅನ್ನು ಕ್ಲಿಕ್ ಮಾಡಿ ನೋಡಬೇಕು. ಆದರೆ ChatGPT ಗೆ ಪ್ರಜಾಪ್ರಭುತ್ವದ ಪ್ರಬಂಧ ಬರೆ ಎಂದು ಹೇಳಿದರೆ, ಅದು ಸ್ವತಃ ಪೂರ್ತಿ ಪ್ರಬಂಧವನ್ನು ಬರೆದುಕೊಡುತ್ತದೆ.

    ಹೀಗೆ, ChatGPT ನಮ್ಮ ಪ್ರಶ್ನೆಯನ್ನು ಅರ್ಥೈಸಿಕೊಂಡು, ಅದಕ್ಕೆ ಸರಿಯಾದ ಉತ್ತರಗಳನ್ನು ನೀಡುತ್ತದೆ. ಹಾಗಾಗಿ ಇದರ ಮೂಲಕ ಮಾಹಿತಿ ಪಡೆಯುವುದು ಸುಲಭವಷ್ಟೇ ಅಲ್ಲ ವೇಗವಾಗಿಯೂ ಹೌದು.

     

    Google ಅನ್ನು ಹಿಂದಿಕ್ಕುವುದೇ ChatGPT? 

    Microsoft ಬಿಡುಗಡೆ ಮಾಡಿದ ChatGPT ಅತ್ಯಂತ ಶೀಘ್ರವಾಗಿ ಜನರ ಮೆಚ್ಚುಗೆಯನ್ನು ಪಡೆಯಿತು. ಕೇವಲ 5 ದಿನಗಳಲ್ಲಿ ಒಂದು ಮಿಲಿಯನ್ ಜನರು ಅದನ್ನು ಬಳಸಲಾರಂಭಿಸಿದರು. Google search engine ನನ್ನೂ ಮೀರಿಸಿ, ChatGPT ಯೇ ಮುಂದಿನ Google ಆಗುವುದು ಎಂಬಷ್ಟರ ಮಟ್ಟಿಗೆ ChatGPT ಪ್ರಖ್ಯಾತಿಯನ್ನು ಪಡೆಯಿತು. ಇದರ ಓಟಕ್ಕೆ ಕಡಿವಾಣ ಹಾಕಲೆಂದೇ Google ನ CEO ಸುಂದರ್ ಪಿಚೈ (Sundar Pichai) ಫೆಬ್ರವರಿ 6 ರಂದು ತಮ್ಮ ಕಂಪನಿಯಿಂದ ಬಿಡುಗಡೆಗೊಳ್ಳುತ್ತಿರುವ “Bard” ಎನ್ನುವ AI Chatbot ಬಗ್ಗೆ ಘೋಷಿಸಿದರು.

     

    ಏನಿದು Bard? ChatGPT ಗೂ Bard ಗೂ ಏನು ವ್ಯತ್ಯಾಸ? 

    Bard ಕೂಡ ChatGPT ನಂತೆಯೇ ಒಂದು chatbot. ChatGPT ಒಂದು Generative Pre-trained Transformer. ಅಂದರೆ ಅದರಲ್ಲಿ ಈಗಾಗಲೇ ಸಾಧ್ಯವಿರುವ ಎಲ್ಲ ಮಾಹಿತಿಯನ್ನೂ ತುಂಬಲಾಗಿದೆ. ಆದರೆ, ಸದ್ಯಕ್ಕೆ ಅದು ಹೊಂದಿರುವುದು 2021 ರ ವರೆಗಿನ ಮಾಹಿತಿಯನ್ನು ಮಾತ್ರ. ಹಾಗಾಗಿ 2021 ರ ನಂತರದ ವಿಷಯಗಳನ್ನು ChatGPT ನೀಡಲಾರದು. ಇದಕ್ಕೆ ಪ್ರತಿಯಾಗಿ, Bard real – time ಮಾಹಿತಿಯನ್ನು ಒದಗಿಸುತ್ತದೆಯಂತೆ. ಅಲ್ಲದೆ ಪದವನ್ನಷ್ಟೇ ಅಲ್ಲದೆ ಅದರ ಭಾವಾರ್ಥವನ್ನೂ ಅರ್ಥೈಸಿಕೊಂಡು, ನಿಖರವಾದ ಉತ್ತರವನ್ನು Bard ನೀಡಬಲ್ಲದು ಎಂದು Sundar Pichai ಹೇಳುತ್ತಾರೆ.

     

    ಇವುಗಳನ್ನು ಹೇಗೆ ಬಳಸಬಹುದು?  

    ChatGPT ಈಗಾಗಲೇ ಜನರ ಬಳಕೆಗೆ ಲಭ್ಯವಿದೆ. ಅಲ್ಲದೆ, ಈ ಸೌಲಭ್ಯವನ್ನು ಸುಲಭವಾಗಿ ಎಲ್ಲರೂ ಬಳಸುವಂತಾಗಲಿ ಎಂದು Microsoft ಇದೀಗ ತಮ್ಮ search engine ಗಳಾದ Bing ಮತ್ತು Edge ನಲ್ಲಿ ChatGPT ಯನ್ನು ಅಳವಡಿಸಿದೆ. ಇಂದಿನಿಂದ ನೀವು Bing ಮತ್ತು Edge ಗಳನ್ನು ಹೊಸ ರೂಪದಲ್ಲಿ ಕಾಣಬಹುದು. Bard ಇನ್ನೂ testing ಹಂತದಲ್ಲಿರುವ ಕಾರಣ, ಅದನ್ನು ಜನತೆಯ ಬಳಕೆಗೆ ಇನ್ನೂ ಬಿಟ್ಟುಕೊಟ್ಟಿಲ್ಲ.

    Verbattle
    Verbattle
    Verbattle
    #rain art bard Bing chatgpt ED Edge Google m mi Microsoft search engine Sundar Pichai technology ಕಲೆ
    Share. Facebook Twitter Pinterest LinkedIn Tumblr Email WhatsApp
    Previous ArticleNorth Korea ದ ಮುಂದಿನ ಸರ್ವಾಧಿಕಾರಿ ಇವಳೇನಾ?
    Next Article Police ಹುದ್ದೆಗೆ ಮಹಿಳೆಯರ ನಿರಾಸಕ್ತಿ
    vartha chakra
    • Website

    Related Posts

    ಓಶೋ ರಜನೀಶ್: ವಿವಾದಗಳ ನಡುವಿನ ‘ಮಹಾನ್ ಸಮ್ಮೋಹಕ’ ಮತ್ತು ಅತಿಮಾನುಷ ಪ್ರಭೆ

    ಫೆಬ್ರವರಿ 11, 2026

    ರಷ್ಯಾ ಅಧ್ಯಕ್ಷ ಪುತಿನ್ ಸುತ್ತ ಲೈಂಗಿಕ ಬ್ಲ್ಯಾಕ್‌ಮೇಲ್ ತಂತ್ರದ ಹುತ್ತ: ಏನಿದು ಹನಿ ಟ್ರ್ಯಾಪ್?

    ಫೆಬ್ರವರಿ 10, 2026

    ಬೆಂಗಳೂರಿನಲ್ಲಿ ಸಖಿ ಆಟೋ

    ಫೆಬ್ರವರಿ 9, 2026

    1 ಟಿಪ್ಪಣಿ

    1. Hwnshm on ಫೆಬ್ರವರಿ 13, 2026 7:54 ಅಪರಾಹ್ನ

      mgm sports betting app https://betmgm-play.com/ betmgm South Dakota

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah ರಲ್ಲಿ ಎದೆ ನಡುಗಿಸಿದ ಭೀಕರ ಹತ್ಯೆ.
    • LinwoodGah ರಲ್ಲಿ ಸಫಾರಿ ಆರಂಭಕ್ಕೆ ಅಶೋಕ್ ಆಗ್ರಹ
    • Jjqgwf ರಲ್ಲಿ ಕಾವೇರಿ ನದಿ ತೀರದ ಈ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ.
    Latest Kannada News

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಫೆಬ್ರವರಿ 14, 2026

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    ಫೆಬ್ರವರಿ 14, 2026

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    ಫೆಬ್ರವರಿ 14, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.