ಬೆಂಗಳೂರು-
ಚಿಕ್ಕಪೇಟೆ ಕ್ಷೇತ್ರದ BJP ಶಾಸಕ ಉದಯ್ ಗರುಡಾಚಾರ್ ಮತ್ತೊಂದು ಅವಧಿಗೆ ಶಾಸಕರಾಗುವ ಮಹತ್ವಾಕಾಂಕ್ಷೆಯೊಂದಿಗೆ ಕೈಗೊಳ್ಳುತ್ತಿರುವ ನಿರ್ಧಾರಗಳು BJP ಮತ್ತು ಸಂಘ ಪರಿವಾರ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿವೆ. ಅದರಲ್ಲೂ ಕ್ಷೇತ್ರದಲ್ಲಿರುವ ಅಲ್ಪಸಂಖ್ಯಾತರ ಓಲೈಕೆಗೆ ಅವರು ಕೈಗೊಳ್ಳುತ್ತಿರುವ ಯೋಜನೆಗಳು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಹಿಂದಿನಿಂದಲೂ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಲೇ ಬರುತ್ತಿರುವ ಉದಯ್ ಗರುಡಾಚಾರ್ ಅವರಿಗೆ ಈ ಬಾರಿ BJP ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇಂತಹ ಸಂದರ್ಭದಲ್ಲೇ ಅವರು ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಕ್ರಾತಿ ಹಬ್ಬದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿರುವ ತಮಿಳರಿಗೆ ಪೊಂಗಲ್ ಹೆಸರಿನಲ್ಲಿ ಕುಕ್ಕರ್ ಹಂಚಿಕೆ ಮಾಡಿದ್ದ ಶಾಸಕರು ಇದೀಗ ಅಲ್ಪಸಂಖ್ಯಾತರಿಗೆ ಕುಕ್ಕರ್ ವಿತರಣೆ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಯಾರೇ ಗೆಲುವು ಸಾಧಿಸಬೇಕಾದರೂ ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕ. ಹೀಗಾಗಿ ಎಲ್ಲ ಪಕ್ಷದವರು ಅಲ್ಪಸಂಖ್ಯಾತರ ಓಲೈಕೆ ಮಾಡುವುದು ಮಾಮೂಲಾಗಿದೆ. ಈ ಅಂಶವನ್ನು ಅರಿತಿರುವ ಉದಯ್ ಗರುಡಾಚಾರ್ ಅವರು ಇದೀಗ ಕ್ಷೇತ್ರದಲ್ಲಿರುವ 30 ಸಾವಿರಕ್ಕೂ ಹೆಚ್ಚು ಅಲ್ಪ ಸಂಖ್ಯಾತರಿಗೆ ಕುಕ್ಕರ್ ವಿತರಣೆ ಮಾಡುವ ಮೂಲಕ ಅವರ ಮತಬ್ಯಾಂಕ್‍ಗೆ ಕೈ ಹಾಕಲು ಮುಂದಾಗಿದ್ದಾರೆ.
1 ಟಿಪ್ಪಣಿ
соут заказать москва проведение оценки условий труда соут