ಬೆಳಗಾವಿ, ಡಿ.14- ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆದಿರುವ ಬೆನ್ನಲ್ಲೇ ಬೆಳಗಾವಿಯಲ್ಲಿ (Belagavi) ನಿನ್ನೆ ತಡ ರಾತ್ರಿ ನಡೆದ ಕಾಂಗ್ರೆಸ್ ಶಾಸಕರ ಔತಣಕೂಟದಲ್ಲಿ ಬಿಜೆಪಿಯ ಮೂವರು ಶಾಸಕರುಗಳು ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇದೊಂದು ಔತಣ ಕೂಟ ಇದರಲ್ಲಿ ಸ್ನೇಹಿತರಾದ ಶಾಸಕರು ಭಾಗವಹಿಸಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಕಾಂಗ್ರೆಸ್ ಹೇಳಿದರೇ ಇದು ಶಿಸ್ತಿನ ಉಲ್ಲಂಘನೆ ಅಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಬೆಳಗಾವಿ ಹೊರ ವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಿನ್ನೆ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು ಸಭೆಯ ನಂತರ ಶಾಸಕರುಗಳಿಗೆ ಔತಣ ಕೂಟ ಆಯೋಜಿಸಲಾಗಿತ್ತು. ಈ ಔತಣ ಕೂಟದಲ್ಲಿ ಬಿಜೆಪಿ ಶಾಸಕರುಗಳಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಪಾಲ್ಗೊಂಡಿದ್ದರು.
ಇವರುಗಳು ಕಾಂಗ್ರೆಸ್ ಸೇರುತ್ತಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಮಶೇಖರ್ ಮತ್ತು ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದ್ದು,ಇವರ ಹಾಜರಿ ಕುತೂಹಲ ಮೂಡಿಸಿದೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನಲ್ಲಿ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ಜೆಡಿಎಸ್‌ನ ವಿಶ್ವನಾಥ್ ರವರು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿ ಸಮ್ಮಿಶ್ರ ಸರ್ಕಾರದ ಪಥನವಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದರು.
ಬಿಜೆಪಿ ಸರ್ಕಾರದಲ್ಲಿ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸಚಿವರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿಯಿಂದ ಗೆದ್ದಿದ್ದ ಈ ಇಬ್ಬರು ಮತ್ತೆ ಕಾಂಗ್ರೆಸ್‌ನತ್ತ ವಾಲಿದ್ದರು.
ಬಿಜೆಪಿಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಇವರುಗಳು, ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದರು. ಈ ಎಲ್ಲದರ ಮಧ್ಯೆ ಅಧಿವೇಶನದಲ್ಲೂ ಬಿಜೆಪಿ ನಡೆಸುವ ಧರಣಿ ಸಭಾತ್ಯಾಗದಲ್ಲಿ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಭಾಗಿಯಾಗುತ್ತಿರಲಿಲ್ಲ. ಈಗ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯ ಔತಣಕೂಟದಲ್ಲಿ ಇವರುಗಳು ಭಾಗಿಯಾಗಿರುವುದು ಕಾಂಗ್ರೆಸ್ ಸೇರುವುದನ್ನು ಖಚಿತಗೊಳಿಸಿದೆ.
ಊಟಕ್ಕೆ ಬಂದಿದ್ದರು:
ಬಿಜೆಪಿ ಶಾಸಕರುಗಳಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ರವರು ನಿನ್ನೆ ರಾತ್ರಿ ನಡೆದ ಕಾಂಗ್ರೆಸ್ ಪಕ್ಷದ ಸಭೆಗೆ ಬಂದಿಲ್ಲ. ಭೋಜನ ಕೂಟಕ್ಕೆ ಬಂದಿದ್ದರು ಅಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಔತಣಕೂಟಕ್ಕೆ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ವಿಶ್ವನಾಥ್ ಸೇರಿದಂತೆ ಅನ್ಯ ಪಕ್ಷದ ಹತ್ತು ಶಾಸಕರು ಬಂದಿದ್ದರು. ಇವರು ಸಿಎಲ್‌ಪಿ ಸಭೆಗೆ ಬಂದಿಲ್ಲ. ನಮ್ಮ ಶಾಸಕಾಂಗ ಪಕ್ಷದ ಸಭೆಗ ಅವರು ಏಕೆ ಬರುತ್ತಾರೆ ಅವರು ನಮ್ಮ ಪಕ್ಷದ ಶಾಸಕರಲ್ಲ ಎಂದು ಹೇಳಿದರು.
ನಮ್ಮ ಆಹ್ವಾನದ ಮೇರೆಗೆ ಭೋಜಕೂಟ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಅಷ್ಟೇ ಎಂದು ಅವರು ಹೇಳಿದರು.
ಶಿಸ್ತು ಉಲ್ಲಂಘನೆಯಲ್ಲ:
ಕಾಂಗ್ರೆಸ್ ಶಾಸಕರ ಭೋಜನ ಕೂಟದ ಸಭೆಗೆ ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಇವರುಗಳು ಭಾಗಿಯಾಗಿರುವುದು ಪಕ್ಷದ ಶಿಸ್ತು ಉಲ್ಲಂಘನೆ ಅಲ್ಲ. ಅವರು ಊಟಕ್ಕೆ ಕರೆದಿದ್ದಾರೆ ಇವರು ಹೋಗಿದ್ದಾರೆ ಅಷ್ಟೇ. ಈ ಬಗ್ಗೆ ಎಸ್.ಟಿ. ಸೋಮಶೇಖರ್ ನನ್ನ ಬಳಿ ಮಾತನಾಡಿದ್ದಾರೆ ಎಂದು ಅಶೋಕ್ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಭೋಜನಕೂಟದಲ್ಲಿ ಪಾಲ್ಗೊಂಡಿರುವ ಹೆಬ್ಬಾರ್ ಮತ್ತು ವಿಶ್ವನಾಥ್ ಜತೆಯೂ ಮಾತನಾಡುತ್ತೇನೆ. ಕಳೆದ ಮೂರು ತಿಂಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ. ಏನೇ ಇರಲಿ ಎಲ್ಲವನ್ನು ಮಾತನಾಡಿ ಸರಿಪಡಿಸಿಕೊಳ್ಳೋಣಅವರು ಭೋಜನ ಕೂಟಕ್ಕೆ ಹೋಗಿದ್ದನ್ನೇ ಶಿಸ್ತು ಉಲ್ಲಂಘನೆ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಅಶೋಕ್ ಹೇಳಿದರು.
ALSO READ | Latest Kannada News | Kannada News Portal


4 ಪ್ರತಿಕ್ರಿಯೆಗಳು
Нужны заклепки? заклепка вытяжная закрытая нержавеющая для прочного соединения листового металла и профиля. Стойкость к коррозии, аккуратная головка, надежная фиксация даже при вибрациях. Подбор размеров и типа борта, быстрая отгрузка и доставка.
Нужен эвакуатор? эвакуатор вызову цена быстрый выезд по Санкт-Петербургу и области. Аккуратно погрузим легковое авто, кроссовер, мотоцикл. Перевозка после ДТП и поломок, помощь с запуском/колесом. Прозрачная цена, без навязываний.
Подробности внутри: Продать электроинструмент Kress дорого — официальная скупка в Москве
Нужен эвакуатор? вызвать эвакуатор в спб дешево быстрый выезд по Санкт-Петербургу и области. Аккуратно погрузим легковое авто, кроссовер, мотоцикл. Перевозка после ДТП и поломок, помощь с запуском/колесом. Прозрачная цена, без навязываний.