ಬೆಂಗಳೂರು,ನ.8-ಪ್ರಿಯಕರ ತನ್ನ ಖಾಸಗಿ ವಿಡಿಯೋಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ನೊಂದ ಮಹಿಳಾ ಥೆರಪಿಸ್ಟ್ ರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಚಾಮುಂಡೇಶ್ವರಿ (35) ಆತ್ಮಹತ್ಯೆ ಮಾಡಿಕೊಂಡವರು.ಕಳೆದ ವಾರ ಮಹಿಳೆ ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿದ್ದು, ನಡೆದ ಘಟನೆ ಕುರಿತು ವಿವರಿಸಿದ್ದಾಳೆ. ಈ ವಿಡಿಯೋವನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಕುರಿತು ಮೃತ ಮಹಿಳೆ ಪತಿಯು, ಆಂಧ್ರ ಪ್ರದೇಶದ ಮಲ್ಲಿಕಾರ್ಜುನ ಎಂಬ ವ್ಯಕ್ತಿಯ ಮೇಲೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದರು. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಮಲ್ಲಿಕಾರ್ಜುನ ಎಂಬಾತ ಆರು ತಿಂಗಳ ಹಿಂದೆ ಮಹಿಳೆಗೆ ಪರಿಚಯವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರ ಸ್ನೇಹ ಗಾಢವಾಗಿದ್ದು, ಅಕ್ರಮ ಸಂಬಂಧಕ್ಕೆ ತಿರುಗಿದೆ. ಇದಾದ ಬಳಿ ಆರೋಪಿ ಮಹಿಳೆಗೆ ಎರಡು ಲಕ್ಷ ರೂ ಹಣದ ಬೇಡಿಕೆ ಒಡ್ಡಿದ್ದಾನೆ. ಒಂದು ವೇಳೆ ಹಣ ನೀಡದಿದ್ದರೆ, ಸಂತ್ರಸ್ತೆಯ ಎಲ್ಲಾ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದಾನೆ
ಸಾವಿಗೆ ಮುನ್ನ ವಿಡಿಯೋ ಮಾಡಿರುವ ಚಾಮುಂಡೇಶ್ವರಿ ಬೆದರಿಕೆ ಒಡ್ಡುತ್ತಿದ್ದ ಪ್ರಿಯಕರನಿಗೆ ಶುಭವಾಗಲಿ ಎಂದು ಹಾರೈಸಿದ್ದು, ಈ ರೀತಿ ಯಾವುದೇ ಮಹಿಳೆಗೆ ತೊಂದರೆ ನೀಡದಂತೆ ಮನವಿ ಮಾಡಿದ್ದಾಳೆ. ಅಲ್ಲದೇ, ಈ ವಿಡಿಯೋವನ್ನು ಮಲ್ಲಿಕಾರ್ಜುನ್ಗೂ ಕಳುಹಿಸಿದ್ದಾಳೆ.
ಪ್ರಕರಣ ತನಿಖೆಯಲ್ಲಿ ಇಬ್ಬರು ವಾಟ್ಸ್ಆಪ್ ನಲ್ಲಿ ಪರಸ್ಪರ ಕಾಲ್ ಮಾಡಿರುವುದು ಕಂಡು ಬಂದಿದೆ. ಆತ್ಮಹತ್ಯೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ನಾಪತ್ತೆಯಾಗಿರುವ ಮಲ್ಲಿಕಾರ್ಜುನ್ಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Previous Articleಸಿದ್ದರಾಮಯ್ಯಗೆ ಬೊಮ್ಮಾಯಿ ಕೇಳಿದ ಪ್ರಶ್ನೆ
Next Article ವಿನಯ್ ಗುರೂಜಿನ ಪೊಲೀಸರು ಏನು ಕೇಳಿದರು?