ಶಿವಮೊಗ್ಗ,ಸೆ.21- ಬಂಧಿತ ಮೂವರು ಶಂಕಿತ ಉಗ್ರರರು ತಮ್ಮ ಮೊಬೈಲ್ನಲ್ಲಿ ಒಂದೇ ತರಹದ ಆ್ಯಪ್ ಉಪಯೋಗಿಸುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಬಂಧಿತ ಶಂಕಿತ ಉಗ್ರರ ಮೊಬೈಲ್ ಪರಿಶೀಲನೆ ವೇಳೆ ಭಯೋತ್ಪಾದಕ ಕೃತ್ಯ ಎಸಗಲು ವೈರ್ಆ್ಯಪ್ ಎಂಬ ಹೆಸರಿನ ಆ್ಯಪ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ.
ವಿವಿಧೆಡೆ ನೂರಕ್ಕೂ ಹೆಚ್ಚು ಮಂದಿ ವೈರ್ಆ್ಯಪ್ ಬಳಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ವೈರ್ಆ್ಯಪ್ ಮೂಲಕ ಇತರೆ ಸಹಚರರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ವೈರ್ಆ್ಯಪ್ ಮೂಲಕ ಶಂಕಿತ ಉಗ್ರರು ಟಾಕಿಂಗ್, ಚಾಟಿಂಗ್ ಮಾಡುತ್ತಿದ್ದು, ಬಾಂಬ್ ತಯಾರಿಕೆ, ಬಾಂಬ್ ಬ್ಲಾಸ್ಟ್, ಜಿಹಾದಿ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಶಂಕಿತ ಉಗ್ರರಿಂದ ರಾಜ್ಯ ಹಾಗೂ ದೇಶದ ವಿವಿಧೆಡೆ ಬಾಂಬ್ ಸ್ಫೋಟ ನಡೆಸಲು ಮಾಸ್ಟರ್ ಪ್ಲಾನ್ ಮಾಡಿದ್ದ ಅನುಮಾನ ವ್ಯಕ್ತವಾಗಿದೆ.
ಬಂಧಿತ ಶಂಕಿತ ಉಗ್ರ ಯಾಸಿನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ನಲ್ಲಿ ಇಂಜಿನಿಯರಿಂಗ್ ಓದಿದ್ದ ಆದರೆ ಇಂಜಿನಿಯರಿಂಗ್ ಪದವಿ ಉತ್ತೀರ್ಣಗೊಂಡಿರಲಿಲ್ಲ. ಅಷ್ಟರಲ್ಲಾಗಲೇ ಯಾಸಿನ್ ಶಾರಿಖ್ ಹಾಗೂ ಮಾಜ್ ಮೂಲಕ ಉಗ್ರರ ಸಂಪರ್ಕಕ್ಕೆ ಬಂದಿದ್ದನು.
ಯಾಸಿನ್ ಹಾಗೂ ಮಾಜ್ ಸೇರಿ ಬಾಂಬ್ ತಯಾರಿಸಲಾರಂಭಿಸಿದ್ದರು. ಜೊತೆಗೆ ಪ್ರಯೋಗಾರ್ಥವಾಗಿ ರಾಜ್ಯದ ವಿವಿಧೆಡೆಯ ನಿರ್ಜನ ಪ್ರದೇಶಗಳಲ್ಲಿ ಬಾಂಬ್ ಸ್ಫೋಟವನ್ನೂ ಮಾಡಿದ್ದರು. ಅಲ್ಲದೇ ರಾಜ್ಯದ ವಿವಿಧೆಡೆ ಹಲವರಿಗೆ ಯಾಸಿನ್ ಹಾಗೂ ಮಾಜ್ ಸೇರಿ ಬಾಂಬ್ ತಯಾರಿಕೆ ತರಬೇತಿ ನೀಡಿರುವ ಶಂಖೆ ವ್ಯಕ್ತವಾಗಿದೆ.
ಈ ಎಲ್ಲ ಮಾಹಿತಿ ಆರೋಪಿಗಳ ಮೊಬೈಲ್ನಲ್ಲಿತ್ತು ಎನ್ನಲಾಗುತ್ತಿದೆ. ಕೇವಲ ರಾಜ್ಯ ಮಾತ್ರವಲ್ಲದೆ ದೇಶದ ವಿವಿಧೆಡೆ ಬಾಂಬ್ ಬ್ಲಾಸ್ಟ್ಗೆ ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಬಂಧಿತ ಶಂಕಿತ ಉಗ್ರ ಸೈಯದ್ ಯಾಸೀನ್ ಶಿವಮೊಗ್ಗ ನಗರದ ಹಳೇ ಗುರುಪುರ ಪ್ರದೇಶದ ಅಡಿಕೆ ತೋಟದ ಬಳಿ ತುಂಗಾ ನದಿ ದಡದಲ್ಲಿ 10-17 ಸಲ ಬಾಂಬ್ ಸ್ಟೋಟ ಟ್ರಯಲ್ ಮಾಡಿದ್ದಾನೆ .
ಸೈಯದ್ ಯಾಸೀನ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಹಿನ್ನೆಲೆ ಕೆಲ ಸ್ಪೋಟಕ ವಸ್ತುಗಳನ್ನ ತಂದು ಇಲ್ಲಿ ಟ್ರಾಯಲ್ ಮಾಡುತ್ತಿದ್ದ. ಇದಕ್ಕೆ ಪೂರಕವಾದ ಸಾಕ್ಷಿಗಳು ಪೊಲೀಸರಿಗೆ ಲಭ್ಯ ಆಗಿರುವ ಸಾಧ್ಯತೆ ಇದೆ. ಘಟನಾ ಸ್ಥಳದಲ್ಲಿ ಕರ್ಪೂರ, ಹಸಿರು ಬಟ್ಟೆ ಜೊತೆಗೆ ಸ್ಥಳಕ್ಕೆ ಬರಲು ಕಾಲು ದಾರಿ ಸಹ ಇರುವುದು ಪತ್ತೆಯಾಗಿದೆ.
Previous Articleಕಾಂಗ್ರೆಸ್ ಗಂಜಿಗಿರಾಕಿಗಳು- ಬಿಜೆಪಿ ತಿರುಗೇಟು
Next Article ಚಿರತೆ ಚರ್ಮ ಮಾರುತ್ತಿದ್ದ ಗ್ಯಾಂಗ್ ಅಂದರ್