ಬೆಂಗಳೂರು,ಫೆ.2-
ತಾವು ಮಾಡಿದ ಆನ್‌ಲೈನ್ ಆರ್ಡರ್‌ನಲ್ಲಿ ಎರಡು ವಸ್ತುಗಳನ್ನು ತಂದಿಲ್ಲವೆಂದು Electronic City ಯ ಪ್ರೆಸ್ಟಿಜ್ ಸನ್ ರೈಸ್ ಪಾರ್ಕ್ ನಾರ್ವುಡ್ ಅಪಾರ್ಟ್‌ಮೆಂಟ್ (Prestige Sunrise Park Norwood ) ನ ದಂಪತಿ, ಬ್ಲಿಂಕಿಟ್ ಆಪ್ (blinkit) ಡೆಲಿವರಿ ಬಾಯ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.
ಬ್ಲಿಂಕಿಟ್ ಆಪ್ ಮೂಲಕ ಆರೋಪಿಗಳಾದ ಶ್ರೀನಿ ಮತ್ತು ಆಕೆಯ ಪತಿ ಎಂಟು ವಿವಿಧ 8 ಬಗೆಯ ದಿನಸಿ ವಸ್ತುಗಳನ್ನು ಆನ್‌ಲೈನ್ ನಲ್ಲಿ ಹಣ ಪಾವತಿಸದೇ Cash on delivery mode ಮೂಲಕ ಆರ್ಡರ್ ಮಾಡಿದ್ದಾರೆ. ಅದರಂತೆ ಡೆಲಿವರಿ ಬಾಯ್ ವೀರೇಶ್ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಗೊಲ್ಲಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್‌ರೈಸ್ ಅಪಾರ್ಟ್‌ಮೆಂಟ್ ಗೆ ಬಂದಿದ್ದರು. ಆರ್ಡರ್ ಮಾಡಿದ ವಸ್ತುಗಳನ್ನು ಮನೆಯೊಳಗೆ ತೆಗೆದುಕೊಂಡು ಹೋಗಿ ಬಾಗಿಲು ಮುಚ್ಚಿಕೊಂಡು, ನಂತರ ಹೊರಗೆ ಬಂದು ಎರಡು ವಸ್ತುಗಳು ಇಲ್ಲವೆಂದು ಆರೋಪ ಮಾಡಿದ್ದಾರೆ. ಆದರೆ, ಡೆಲಿವರಿ ಬಾಯ್ ನಾನು ಎಂಟೂ ವಸ್ತುಗಳನ್ನು ತಲುಪಿಸಿದ್ದು, ಹಣವನ್ನು ಕೊಡುವಂತೆ ಕೇಳಿದ್ದಾನೆ. ಇನ್ನು ಆರ್ಡರ್ ಮಾಡಿದ ವಸ್ತುಗಳಿಗೆ ಹಣ ಕೊಡದೇ ಕ್ಯಾತೆ ತೆಗೆದಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಡೆಲಿವರಿ ಬಾಯ್ ವೀರೇಶ್ ಮೇಲೆ ಹಲ್ಲೆ ಮಾಡಿದ್ದಾರೆ.
ಇದರಿಂದ ನೊಂದ ಡೆಲಿವರಿ ಬಾಯ್ ತಮ್ಮ ಸಹೋದ್ಯೋಗಿಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಆ ಪ್ರದೇಶದ ಎಲ್ಲಾ ಡೆಲಿವರಿ ಬಾಯ್ ಗಳು ಅಪಾರ್ಟ್ ಮೆಂಟ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಹೆಬ್ಬುಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದರೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಮಹಿಳೆ ಪರಾರಿಯಾಗಿದ್ದಾರೆ.