ನವದೆಹಲಿ – ಬಾಲಿವುಡ್ (Bollywood) ಬಾದ್ ಶಾ ಶಾರುಖ್ ಖಾನ್ (Shahrukh Khan) ಕೀರ್ತಿಗೆ ಪಾತ್ರರಾಗಿದ್ದಾರೆ. ಮೆಸ್ಸಿ ಎಲಾನ್ ಮಸ್ಕ್ ಮಾರ್ಕ್ ಝಕರ್ಬರ್ಗ್ ಸೇರಿದಂತೆ ಹಲವಾರು ಖ್ಯಾತ ನಾಮರನ್ನು ಹಿಂದಿಕ್ಕಿ,ಟೈಮ್ಸ್ ನಿಯತಕಾಲಿಕೆಯ ‘100 ಪ್ರಭಾವಿ ವ್ಯಕ್ತಿ’ಗಳ ಪಟ್ಟಿಯಲ್ಲಿ (In Times Magazine’s ‘100 Most Influential People’ list) ಬಾಲಿವುಡ್ ನಟ ಶಾರುಖ್ ಖಾನ್ ಮೊದಲ ಸ್ಥಾನ ಗಳಿಸಿದ್ದಾರೆ.
ಅಮೆರಿಕನ್ ಮೂಲದ ಈ ನಿಯತಕಾಲಿಕೆ ನಡೆಸುವ ಈ ವಾರ್ಷಿಕ ಸಮೀಕ್ಷೆಯಲ್ಲಿ ಓದುಗರು ಪ್ರಭಾವಿ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾರೆ. ಈ ಸಮೀಕ್ಷೆಯಲ್ಲಿ ಚಲಾವಣೆಗೊಂಡ ಒಟ್ಟು 12 ಲಕ್ಷ ಮತಗಳಲ್ಲಿ ಶಾರುಖ್ ಖಾನ್ ಅವರು ಶೇ 4 ರಷ್ಟು ಮತ ಗಳಿಸಿದ್ದಾರೆ ದೇಶದ ಇಸ್ಲಾಮಿಕ್ ಆಡಳಿತದ ವಿರುದ್ಧವಾಗಿ ಪ್ರತಿಭಟನೆ ನಡೆಸಿದ್ದ ಇರಾನ್ ಮಹಿಳೆಯರು ಶೇ 3 ರಷ್ಟು ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಭಾರತ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಗಳಿಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಬೇರೆ ಬೇರೆ ದೇಶಗಳ ಜನರು ಅವರನ್ನು ಇಷ್ಟಪಡುತ್ತಾರೆ. ಇದೀಗ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ನಂಬರ್ ಒನ್ ಪಟ್ಟಕ್ಕೆ ಏರುವ ಮೂಲಕ ಮತ್ತೊಂದು ದಾಖಲೆ ಮಾಡಿದ್ದಾರೆ.

ವಿಶ್ವದ ಪ್ರಭಾವಿಗಳ ಆಯ್ಕೆಗಾಗಿ ನಿಯತಕಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ಆಸ್ಕರ್ ವಿಜೇತ ನಟಿ ಮಿಶಾಲ್ ಯೋ, ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್, ಮೆಟಾ ಸಿಇಓ ಮಾರ್ಕ್ ಝಕರ್ಬರ್ಗ್, ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಮತ್ತು ಟ್ವಿಟರ್ ಸಿಇಒ ಎಲೋನ್ ಮಸ್ಕ್ ಸೇರಿದಂತೆ ಮುಂತಾದವರನ್ನು ಶಾರುಖ್ ಖಾನ್ ಹಿಂದಿಕ್ಕಿದ್ದಾರೆ. ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು 5ನೇ ಸ್ಥಾನದಲ್ಲಿದ್ದಾರೆ.
ಶಾರುಖ್ ಖಾನ್ ಅವರು ಅಗ್ರ ಸ್ಥಾನ ಪಡೆದಿರುವುದಕ್ಕೆ ಅಬಿಮಾನಿಗಳು, ಗಣ್ಯರು ಸೇರಿದಂತೆ ಅನೇಕರು ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಈ ನಡುವೆ ನಿನ್ನೆ ನಡೆದ ಐಪಿಎಲ್ ಹೈ ವೋಲ್ಟೇಜ್ ಪಂದ್ಯದಲ್ಲಿ ಶಾರುಕ್ ಒಡೆತನದ ಕೆಕೆಆರ್ ತಂಡ ಆರ್ಸಿಬಿ ವಿರುದ್ಧ ಭರ್ಜರಿ ಜಯ ದಾಖಲಿಸಿದೆ ಇದು ಬಾಲಿವುಡ್ ಕಿಂಗ್ ಖಾನ್ ಸಂಭ್ರಮಕ್ಕೆ ಮತ್ತಷ್ಟು ಇಂಬು ತಂದುಕೊಟ್ಟಿದೆ.
ತಂಡ ಗೆದ್ದ ಖುಷಿಯಲ್ಲಿ ಶಾರುಕ್ ತೇಲಾಡಿದ್ದು. ತಮ್ಮ ಬ್ಲಾಕ್‌ಬಾಸ್ಟರ್ ‘ಪಠಾಣ್‘ ಚಿತ್ರದ ಜನಪ್ರಿಯ ಹಾಡು ‘ಜೂಮ್ ಜೋ ಪಠಾಣ್‘ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವೇಳೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೂ ನೃತ್ಯ ಮಾಡುವಂತೆ ಹೇಳಿದ್ದಾರೆ. ಶಾರುಕ್ ಹೇಳಿಕೊಟ್ಟಂತೆ ಹಾಡಿನ ‘ಹುಕ್ ಸ್ಟೆಪ್‘ ಹಾಕಲು ವಿರಾಟ್ ಪ್ರಯತ್ನಿಸಿದ್ದಾರೆ. ವಿರಾಟ್‌ನ ಕೆನ್ನೆ ಹಿಡಿದು ಶಾರುಕ್ ಮಾತನಾಡಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ಇನ್ನಷ್ಟು ಖುಷಿ ಪಟ್ಟಿದ್ದಾರೆ


6 ಪ್ರತಿಕ್ರಿಯೆಗಳು
This incomparably praised sweepstakes podium, wow vegas login , brings real casino thrills to your select with no purchase fated in support of core gameplay. Boasting millions of players and fragrant bonuses, it’s a go-to superior for horseplay, legal popular gaming across most of the US.
Sweet Bonanza tempts you with juicy fruits, heart candies, and bomb multipliers ready to explode your balance. One sweet bonanza real money lucky spin can change everything. Dive into the sweetness!
Charge into the heart of the prairie with epic spins and roaring wins! best buffalo slot machine delivers stampeding free games, wild multipliers, and life-changing jackpots that keep you coming back. Play now and let the herd lead you to riches!
Chumba Casino delivers big fun with zero risk. Claim your free chumba casino games bonus and play top-tier slots anytime. Real rewards are waiting — start spinning!
No middleman. No delays. Just you, your crypto, and massive wins on stake casino . Join now and see why everyone’s talking about it.
Join DraftKings casino login Casino for epic value. Play $5 to unlock 500 spins on hot games plus up to $1K back if the first day dips. Win like never before!