ಹೈದರಾಬಾದ್ – ಕರ್ನಾಟಕ ವಿಧಾನಸಭಾ ಚುನಾವಣೇ ವೇಳೆ ಅಂದಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿ ಪಕ್ಷ ಕಾಂಗ್ರೆಸ್ ಪೇಸಿಎಂ ಅಭಿಯಾನ ಆರಂಭಿಸಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು.
ಅಷ್ಟೇ ಅಲ್ಲ ಶೇಕಡಾ 40ರಷ್ಟು ಕಮೀಷನರ್ ಆರೋಪದ ಮೂಲಕ ಬಿಜೆಪಿಯನ್ನು ಕಟ್ಟಿಹಾಕಿತ್ತು.
ರಾಜ್ಯಾದ್ಯಂತ ನಡೆಸಿದ ಕಾಂಗ್ರೆಸ್ ನ ಈ ಅಭಿಯಾನ ಮತದಾರರ ಗಮನ ಸೆಳೆಯುವ ಮೂಲಕ ಭಾರಿ ಯಶಸ್ಸು ಕಂಡಿತ್ತು.ಅಷ್ಟೇ ಅಲ್ಲ ಚುನಾವಣೆಯಲ್ಲಿ ಬಿಜೆಪಿಗೆ ಆಘಾತವನ್ನು ನೀಡಿತು.
ಇದೇ ಯಶಸ್ಸಿನ ತಂತ್ರವನ್ನು ಇದೀಗ ಸದ್ಯದಲ್ಲೇ ಚುನಾವಣೆ ನಡೆಯಲಿರುವ ನೆರೆಯ ರಾಜ್ಯ ತೆಲಂಗಾಣದಲ್ಲೂ ಮುಂದುವರೆಸಿರುವ ಕಾಂಗ್ರೆಸ್,ಇಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಹೊಸ ಅಭಿಯಾನ ಆರಂಭಿಸಿದೆ. ತೆಲಂಗಾಣದಲ್ಲಿ ಸಿನಿಮಾ ಜನ ಸಾಮಾನ್ಯರ ಅವಿಭಾಜ್ಯ ಹಾಗೂ ಪ್ರೀತಿಯ ವಿಷಯ. ಇದೇ ಸಿನಿಮಾ ಮಾದರಿಯನ್ನು ಅಭಿಯಾನಕ್ಕೂ ಬಳಸಿದೆ.

ಸಿನಿಮಾ ಟಿಕೆಟ್ ಬುಕ್ ಮಾಡುವ ಆ್ಯಪ್ ಬುಕ್ ಮೈ ಶೋ ಮಾದರಿಯಲ್ಲಿ ಪೋಸ್ಟರ್ ಸಿದ್ದಪಡಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್.ಭಾವಚಿತ್ರದ ಪೋಸ್ಟರ್ ಅಳವಡಿಸಿ ಬುಕ್ ಮೈ ಸಿಎಂ ಎಂಬ ಅಭಿಯಾನ ಆರಂಭಿಸಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ಆರಂಭಿಸಿರುವ ಈ ಅಭಿಯಾನದ ಮೂಲಕ ತೆಲಂಗಾಣದಲ್ಲಿ ಕಾಂಗ್ರೆಸ್ ಹೊಸ ಸಂಚಲನ ಸೃಷ್ಟಿಸಿದೆ. ಸಿನಿಮಾ ಸೇರಿದಂತೆ ಇತರ ಮನರಂಜನೆ ಟಿಕೆಟ್ ಬುಕಿಂಗ್ ಮಾಡುವ ತಾಣದ ಪರಿಕಲ್ಪನೆಯಲ್ಲಿ ಈ ಅಭಿಯಾನ ಆರಂಭಿಸಲಾಗಿದೆ.
ಸಿಎಂ ಕೆ ಚಂದ್ರಶೇಖರ್ ರಾವ್ ಮೇಲೆ 30 ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರ ಆರೋಪ ಮಾಡಿರುವ ಕಾಂಗ್ರೆಸ್, ಬುಕ್ ಮೈ ಸಿಎಂ (Book My CM) ಕೆಳಗೆ ಕೆ ಚಂದ್ರಶೇಖರ್ ರಾವ್ ಫೋಟೋ ಬಳಸಲಾಗಿದೆ. ರಾವ್ ಕಪ್ಪು ಗ್ಲಾಸ್ ಧರಿಸಿದ್ದು, ಈ ಗ್ಲಾಸ್ ಮೇಲೆ 30 ಪರ್ಸೆಂಟ್ ಎಂದು ಬರೆಯಲಾಗಿದೆ. ಇಷ್ಟೇ ಅಲ್ಲ ಥೀಯೆಟರ್‌ನಲ್ಲಿ ಹಗರಣ 2023 ಎಂದು ಬರೆಯಲಾಗಿದೆ. ಉತ್ತಮ ಅನುಭವಕ್ಕಾಗಿ 3ಡಿ ಶೇಕಡಾ 30 ಪರ್ಸೆಂಟ್ ಗ್ಲಾಸ್ ಬಳಕೆ ಮಾಡಿ ಎಂದು ಬರೆದಿದ್ದಾರೆ.


5 ಪ್ರತಿಕ್ರಿಯೆಗಳು
JULESLOT
yo ngl this thing is lowkey addictive lol play dream catcher hit different fr fr, been playing for like two weeks and cant stop, imo its worth checking out if ur into this kinda stuff
부산호빠
TOTO138 LOGIN
Quick pros:
* Fast loading times
* Mobile friendly interface
* Good variety of games
* Decent customer support response
* Clean layout, easy to navigate
mobile drip games online