ಬೆಂಗಳೂರು,ಆ.14,:
ಹೊಸದಾಗಿ ಬಿಪಿಎಲ್ ಕಾರ್ಡುಗಳಿಗಾಗಿ ಕಾಯುತ್ತಿದ್ದ ರಾಜ್ಯದ ಜನರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೊಸ ಪಡಿತರ ಚೀಟಿ ಕೋರಿ ಸಲ್ಲಿಸಲಾದ ಅರ್ಜಿಗಳ ಪರಿಶೀಲನೆ ಕರಿಯ ಪೂರ್ಣಗೊಂಡಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸದಾಗಿ ಬಿಪಿಎಲ್ ಕಾರ್ಡು ಕೋರಿ ಎರಡು ಲಕ್ಷದ 95,000 ಜನ ಅರ್ಜಿ ಸಲ್ಲಿಸಿದ್ದರು ಇವುಗಳನ್ನು ಪರಿಶೀಲನೆ ನಡೆಸಿದಾಗ 50,000ಕ್ಕೂ ಅಧಿಕ ಅರ್ಜಿಗಳು ನಿಗದಿತ ಮಾನದಂಡದಲ್ಲಿ ಇರಲಿಲ್ಲ ಹೀಗಾಗಿ ಅವುಗಳನ್ನು ವಜಾ ಮಾಡಿದ್ದು ಉಳಿದ ಎರಡು ಲಕ್ಷ 40,000 ಫಲಾನುಭವಿಗಳಿಗೆ ಪಡಿತರ ಚೀಟಿ ಸಿಗಲಿದೆ ಎಂದು ತಿಳಿಸಿದರು.
ಇದರ ಜೊತೆಗೆ ಇನ್ನೂ ಅನೇಕ ಅನರ್ಹರು ಬಿಪಿಎಲ್ ಕಾರ್ಡು ಹೊಂದಿರುವ ಬಗ್ಗೆ ಮಾಹಿತಿ ಇದೆ ಈ ಹಿನ್ನೆಲೆಯಲ್ಲಿ ಅವುಗಳನ್ನು ಪರಿಶೀಲನೆ ನಡೆಸಲಾಗುತ್ತದೆ ಈ ವೇಳೆ ಅನರ್ಹತೆ ಗೊತ್ತಾದರೆ ಅವುಗಳನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.
ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡು ವಿತರಿಸಲಾಗುವುದು ಅಗತ್ಯವಿರುವವರಿಗೆ ಎಪಿಎಲ್ ಕಾರ್ಡು ನೀಡಲಾಗುವುದು ಸದ್ಯ ರಾಜ್ಯದಲ್ಲಿ 14 ಲಕ್ಷ ಎಪಿಎಲ್ ಕಾರ್ಡುದಾರಿದ್ದಾರೆ. ಇವರಿಗೆ ಕಡಿಮೆ ದರದಲ್ಲಿ ಪಡಿತರ ವಿತರಿಸಲಾಗುತ್ತದೆ ಇದರಲ್ಲಿ ಸುಮಾರು 2 ಲಕ್ಷ ಮಂದಿ ಮಾತ್ರ ಪಡಿತರ ಖರೀದಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.
Previous Articleಸೆಪ್ಟಂಬರ್ 15ರಿಂದ ಬಿಜೆಪಿ ಮತ್ತೊಂದು ಪಾದಯಾತ್ರೆ.
Next Article ಸತೀಶ್ ಜಾರಕಿಹೊಳಿ ತಕರಾರು..