ಸ್ಕೂಟರ್ ಚಾಲನೆ ವೇಳೆ ಆಕ್ಟ್ರೀವ್ ಹೋಂಡಾ ಸ್ಕೂಟ ರ್ ಹೊತ್ತಿಉರಿದ ಪರಿಣಾಮ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ ನಡೆದಿದೆ.
ಘಟನೆಯಲ್ಲಿ ಬೈಕ್ ನಲ್ಲಿದ್ದ ಇಬ್ಬರು ತೀವ್ರ ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡಿದ್ದಾರೆ.
ರಸ್ತೆ ಮಧ್ಯೆ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಪೆಟ್ರೋಲ್ ಪೈಪ್‌ನಿಂದ ಪೆಟ್ರೋಲ್ ಹೊರಗೆ ಬಂದು ಸ್ಕೂಟರ್ ಹೊತ್ತಿಕೊಂಡಿದೆ. ಬೆಂಕಿಯ ಕಿನ್ನಾಲೆಗೆ ಹೆಚ್ಚಾಗಿ ವ್ಯಾಪಿಸಿದ ಪರಿಣಾಮ ಬೈಕ್ ಸವಾರ ಹಾಗು ಹಿಂಬದಿ ಸವಾರನಿಗೆ ಬೆಂಕಿ ತಗುಲಿದೆ. ಈ ವೇಳೆ ಬೈಕ್ ಸವಾರನಿಗೆ ಶೇ.90 ರಷ್ಟು ಸುಟ್ಟ ಗಾಯಗಳಾಗಿದ್ದು, ಸ್ಥಳೀಯರು ರಕ್ಷಣೆ ಮಾಡುವ ಯತ್ನ ಮಾಡಿದ್ದಾರೆ. ಏಕಾಏಕಿ ಸ್ಕೂಟರ್ ಗೆ ಹೊತ್ತಿಕೊಂಡ ಬೆಂಕಿ ಆರಿಸಲು ವಿಫಲವಾಗಿದ್ದಾರೆ.
ಘಟನೆಯಲ್ಲಿ ಬೆಂಕಿಯಿಂದ ನರಳುತ್ತಿದ್ದ ಸವಾರರನ್ನು ರಕ್ಷಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಕೂಟರ್‌ನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಇಬ್ಬರ ಸ್ಥಿತಿ ಚಿಂತಾಜನಕ
Previous Articleಬೆಚ್ಚಿ ಬಿದ್ದ ಬೆಳಗಾವಿ ಮಂದಿ : ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳು
Next Article ದುಬೈನಲ್ಲಿ 777 ಚಾರ್ಲಿ ಟೀಂ