ಹಿಮಾಚಲ ಪ್ರದೇಶ: ಇಲ್ಲಿನ ಕುಲುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ಸೊಂದು ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ ಶಾಲಾ ಮಕ್ಕಳು ಸೇರಿದಂತೆ 16ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಮಾಹಿತಿ ಪ್ರಕಾರ, ಇಂದು ಬೆಳಗ್ಗೆ 8:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಶೇನ್‌ಶಾರ್‌ನಿಂದ ಸೈಂಜ್ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಜಂಗ್ಲಾ ಗ್ರಾಮದ ಬಳಿ ರಸ್ತೆಯಿಂದ ಆಳದ ಪ್ರಪಾತಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಮಕ್ಕಳು ಸೇರಿದಂತೆ 16ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಸ್‌ನಲ್ಲಿ 35- 40 ಮಂದಿ ಇದ್ದರು. ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಿಂದಾಗಿ ಇಲ್ಲಿಯವರೆಗೂ ಆರು ಮೃತದೇಹಗಳು ಮತ್ತು ಮೂವರು ಗಾಯಾಳುಗಳನ್ನು ಹೊರತೆಗೆಯಲಾಗಿದೆ. ಅನೇಕ ಜನರು ಬಸ್ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ. ಬಸ್ ಅತ್ಯಂತ ಆಳವಾದ ಪ್ರಪಾತಕ್ಕೆ ಬಿದ್ದಿರುವುದರಿಂದ ಅಪಘಾತದಲ್ಲಿ ಬಸ್ ನಜ್ಜುಗುಜ್ಜಾಗಿದೆ.
ಪ್ರಪಾತಕ್ಕೆ ಉರುಳಿದ ಬಸ್: ಉಸಿರು ಚೆಲ್ಲಿದ 16 ಪ್ರಯಾಣಿಕರು
Previous Articleಉಡುಪಿ ಮೂಲದ ಸಿನಿ ಶೆಟ್ಟಿಗೆ 2022ರ ಫೆಮಿನಾ ಮಿಸ್ ಇಂಡಿಯಾ ಕಿರೀಟ
Next Article ದೇಶದಲ್ಲಿ 16,135 ಜನರಿಗೆ ಕೊರೋನಾ ಸೋಂಕು, 24 ಜೀವಹಾನಿ