ಬೆಂಗಳೂರು;
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಸೇರಿದಂತೆ ಹಲವು ಪ್ರಸ್ತಾಪ ಆರೋಪ ಪ್ರಕರಣಗಳನ್ನು ಕೈಗೆತ್ತಿಕೊಂಡಿರುವ ಪ್ರತಿ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುತ್ತಿರುವ ಬೆನ್ನಲ್ಲೇ ತೆರೆ ಮರೆಯಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯತೊಡಗಿವೆ.
ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ನಿರ್ಧಾರ ಪ್ರತಿಭಟಿಸಿ ಆ ಪಕ್ಷದಿಂದ ಹೊರಬಂದು ತಮ್ಮದೇ ನಿಜವಾದ ಜೆಡಿಎಸ್ ಎಂದು ಪ್ರತಿಪಾದಿಸಿ ನ್ಯಾಯಾಂಗ ಹೋರಾಟ ಆರಂಭಿಸಿರುವ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರನ್ನು ಮುಂದಿಟ್ಟುಕೊಂಡು ಹೊಸ ರಾಜಕೀಯ ಪ್ರಯೋಗ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಜೆ ಡಿ ಎಸ್ ನಿಂದ ಹೊರಬಂದಿರುವ ಸಿಎಂ ಇಬ್ರಾಹಿಂ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿ ಪಿ ಸಂಘಟಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಇಬ್ರಾಹಿಂ ಅವರು ಈಗಾಗಲೇ ಹಲವು ಸುತ್ತಿನಲ್ಲಿ ಶರದ್ ಪವಾರ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎನ್ ಸಿ ಪಿ ಘಟಕ ತಲೆ ಎತ್ತಲಿದ್ದು ಈ ಪಕ್ಷದೊಂದಿಗೆ ಜೆಡಿಎಸ್ ನಲ್ಲಿರುವ ಕೆಲವು ಅತೃತ್ವ ಶಾಸಕರು ಮತ್ತು ಬಿಜೆಪಿಯಲ್ಲಿರುವ ಕೆಲವು ಶಾಸಕರು ಅಧಿಕೃತವಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ಕೇಂದ್ರ ಸಚಿವ ಕುಮಾರಸ್ವಾಮಿ ಹಲವಾರು ಹೊಸ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಸಮರ ಘೋಷಣೆ ಮಾಡಿದ್ದಾರೆ ಇವರಿಗೆ ತಿರುಗೇಟು ನೀಡುವ ದೃಷ್ಟಿಯಿಂದ ಈ ರಾಜಕೀಯ ತಂತ್ರಗಾರಿಕೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಸದ್ಯ ವಿಧಾನಸಭೆಯಲ್ಲಿ ಜೆಡಿಎಸ್ 19 ಶಾಸಕರಿದ್ದು ಇವರಲ್ಲಿ ಅನೇಕರು ತಮ್ಮ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಪರಿಣಾಮ ಅಸಮಾಧಾನಗೊಂಡಿದ್ದಾರೆ ಹೀಗಾಗಿ ಇವರನ್ನು ಎನ್ ಸಿ ಪಿ ಗೆ ಸೆಳೆದುಕೊಂಡು ಜೆಡಿಎಸ್ ಬಲ ಕುಗ್ಗಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಿಎಂ ಇಬ್ರಾಹಿಂ ಅವರ ಆಪ್ತ ಮೂಲಗಳು ತಿಳಿಸಿವೆ.
ಸುಮಾರು 10 ಕ್ಕೂ ಹೆಚ್ಚು ಜೆಡಿಎಸ್ ಶಾಸಕರು ನೂತನವಾಗಿ ರಚನೆಯಾಗಲಿರುವ ಎನ್‌ಸಿಪಿ ಜೊತೆ ಗುರುತಿಸಿಕೊಳ್ಳುವ ಸಾಧ್ಯತೆಯಿದ್ದು ಹೀಗೆ ಹೀಗೆ ಮಾಡಿದಲ್ಲಿ ಕುಮಾರಸ್ವಾಮಿ ಅವರ ಆತ್ಮಬಲ ಕುಗ್ಗಲಿದೆ ಎನ್ನುವುದು ಲೆಕ್ಕಾಚಾರವಾಗಿದೆ.
ಆಶಾಡ ಮಾಸ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ಶರದ್ ಪವಾರ್ ನೇತೃತ್ವದ ಸಂಘಟಿಸುವ ಪ್ರಯತ್ನಗಳು ಚುರುಕು ಪಡೆಯಲಿವೆ ಎಂದು ಹೇಳಲಾಗುತ್ತಿದೆ
Previous Articleಪೊಲೀಸ್ ಕಮೀಷನರ್ Bike ride.
Next Article ಸೂರಜ್ ರೇವಣ್ಣ ಅವರಿಗೆ Bail granted.