ಕೆನಾಡ ದೇಶದಲ್ಲಿ ಹೊತ್ತಿ ಉರಿಯುತ್ತಿರುವ ಕಾಳ್ಗಿಚ್ಚಿನಿಂದಾಗಿ ಹೊರಟ ಹೊಗೆ ಅಮೆರಿಕಾವನ್ನು ಆವರಿಸುತ್ತಿದೆ. ಕೆನಾಡದಲ್ಲಿ ಸುಮಾರು ೯೫ ಲಕ್ಷ ಎಕರೆ ಪ್ರದೇಶದಳ್ಳಿ ಹೊತ್ತಿ ಉರಿದ ಕಾಳ್ಗಿಚ್ಚು ಅಮೆರಿಕಾಕ್ಕೆ ದೊಡ್ಡ ಸಮಸ್ಯೆಯಾಗಿದೆ. ಈ ಕಾಳ್ಗಿಚ್ಚಿನ ಹೊಗೆ ಅಮೆರಿಕಾದ ಅನೇಕ ರಾಜ್ಯಗಳಲ್ಲಿ ಜನ ಜೀವನಕ್ಕೆ ತೊಂದರೆ ಉಂಟು ಮಾಡಿದೆ. ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿಸಿ ಸೇರಿದಂತೆ ಫಿಲಡೆಲ್ಫಿಯಾ ಮತ್ತು ನ್ಯೂಯಾರ್ಕ್ ನಗರಗಳಲ್ಲೂ ಕೂಡ ಜನರಿಗೆ ಹೊಗೆಯ ಸಮಸ್ಯೆ ಎದುರಾಗಿದೆ. ಈಗಾಗಲೇ ಜನರಿಗೆ ಹೊಗೆಯಿಂದ ಹಾನಿಯಾಗದಂತೆ ತಪ್ಪಿಸಿಕೊಳ್ಳಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿ.
ನ್ಯೂಯಾರ್ಕ್ ನ ಲಗಾರ್ಡಿಯ ಏರ್ಪೋರ್ಟ್ ನಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ನ್ಯೂಜರ್ಸಿ ನಗರದಲ್ಲೂ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ನ್ಯೂಯಾರ್ಕ್ ನಗರದಲ್ಲಿ ಹೊಗೆಯ ಪರದೆಯೊಂದು ಆವರಿಸಿಕೊಂಡಂತೆ ಭಾಸವಾಗುತ್ತಿದೆ. ಆಸ್ತಮಾ ಮುಂತಾದ ಉಸಿರಾಟದ ತೊಂದರೆಗಳಿರುವ ಜನರು ಅಮೆರಿಕಾದ ಅನೇಕ ಕಡೆ ಬಹಳ ಸಂಕಷ್ಟಕ್ಕೆ ಈಡಾಗಿದ್ದಾರೆ. ಕೆನಡಾ ಈಗಾಗಲೇ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದ್ದು ಬಹಳಷ್ಟು ಕಾಳ್ಗಿಚ್ಚನ್ನು ನಿಯಂತ್ರಣ ಮಾಡಲಾಗಿದೆ ಎಂದು ಹೇಳಿಕೊಂಡಿದೆ.