ಬರೇಲಿ (ಉತ್ತರಾಖಂಡ),ಜೂ.21- ವೇಗವಾಗಿ ಬಂದ ಕಾರು ಟ್ಯಾಂಕರ್ ಡಿಕ್ಕಿ ಹೊಡೆದು ಐವರು ಸಾವನ್ನಪ್ಪಿರುವ ದಾರುಣ ಘಟನೆ ನಗರದ ಹೊರವಲಯದ ಲಾಲ್ಪುರದಲ್ಲಿ ನಡೆದಿದೆ.
ಖೇತಾಡಿ ರಾಮನಗರದ ಸಗೀರ್ (35), ಭವಾನಿಗಂಜ್ ನ ಮುಝಮ್ಮಿಲ್ (36), ರಾಮನಗರದ ಮೊ.ತಾಹಿರ್ (40), ಭವಾನಿಗಂಜ್ ನ ಇಮ್ರಾನ್ ಖಾನ್ (38) ಹಾಗು ರಾಮನಗರದ ಮೊಹಮ್ಮದ್ ಫರೀದ್ (35) ಮೃತಪಟ್ಟವರು.
ಉತ್ತರಾಖಂಡದ ರಾಮ್ ನಗರದಿಂದ ವ್ಯಾಪಾರಿಗಳು ಹರ್ದೋಯ್‌ನ ಬಿಲ್ಗ್ರಾಮ್ ಷರೀಫ್‌ನಲ್ಲಿರುವ ದರ್ಗಾಕ್ಕೆ ಹೋಗುತ್ತಿದ್ದರು. ಎರಡು ವಾಹನಗಳಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು. ಇಜ್ಜತ್‌ನಗರ ಪೊಲೀಸ್ ಠಾಣೆಯ ಲಾಲ್‌ಪುರ ಔಟ್‌ಪೋಸ್ಟ್ ಅಹ್ಲಾದ್‌ಪುರ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಂಕ್ಚರ್ ಆಗಿ ಎದುರಿಗೆ ಬರುತ್ತಿದ್ದ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಕಾರಿನಲ್ಲಿ ಕುಳಿತಿದ್ದ ಐವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಕಾರಿನಿಂದ ಹೊರ ತೆಗೆದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಇಜ್ಜತ್‌ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Previous Articleಒಡಿಯಾ ಧಾರಾವಾಹಿ ನಟಿ ರಶ್ಮಿರೇಖಾ ಓಜಾ ಸಾವು!
Next Article ಸರ್ಕಾರಿ ನೌಕರಿ ಹೆಸರಲ್ಲಿ ವಂಚನೆ