ಬೆಂಗಳೂರು, ಡಿ.8-
ರಾಜ್ಯದಲ್ಲಿ ಸಂಭವಿಸುವ ಪ್ರತಿ ಸಾವಿಗೂ ನಿಖರ ಕಾರಣ ತಿಳಿಯಲು ಆರೋಗ್ಯ ಇಲಾಖೆ ಮುಂದಾಗಿದೆ ಈ ಹಿನ್ನೆಲೆಯಲ್ಲಿ ಮರಣ ಕಾರಣದ ವೈದ್ಯಕೀಯ ಪ್ರಮಾಣ ನೀಡುವುದನ್ನು ಕಡ್ಡಾಯಗೊಳಿ ಆದೇಶ ಹೊರಡಿಸಲಾಗಿದೆ
ಸಾವು ಸಂಭವಿಸಿದ 21 ದಿನದಲ್ಲಿ ಸಂಬಂಧಪಟ್ಟವರು ಮರಣ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಈ ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ನೋಂದಾಯಿತವಾಗುವ ಸಾವುಗಳಲ್ಲಿ ಶೇಕಡ 26.7 ರಷ್ಟು ಸಾವುಗಳಿಗೆ ಮಾತ್ರ ವೈದ್ಯಕೀಯವಾಗಿ ಪ್ರಮಾಣ ಪತ್ರ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಸಾವಿನ ನಿಖರ ಕಾರಣ ತಿಳಿಯುವ ಉದ್ದೇಶದಿಂದ ವೈದ್ಯಕೀಯ ಸಂಸ್ಥೆಗಳಲ್ಲಿನ ಸಾವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ವ್ಯಕ್ತಿ ಮರಣ ಹೊಂದಿದಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಂಪನ್ಮೂಲ ಹಂಚಿಕೆ, ಸೂಚಕಗಳ ಮೇಲ್ವಿಚಾರಣೆ, ಕಾರ್ಯಕ್ರಮಗಳಿಗೆ ಆದ್ಯತೆಗಳನ್ನು ಗುರುತಿಸುವುದು ಮತ್ತು ಇತರ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪುರಾವೆ ಆಧಾರಿತ ನಿರ್ಧಾರ ತೆಗೆದುಕೊಳ್ಳಲು ನಿರ್ವಾಹಕರು ಮತ್ತು ನೀತಿ ಯೋಜಕರು ನಿಯಮಿತವಾಗಿ ವಿಶ್ವಾಸಾರ್ಹ ಕಾರಣ-ನಿರ್ದಿಷ್ಟ ಮರಣ ಅಂಕಿಅಂಶಗಳನ್ನು ಅಗತ್ಯವಿದೆ. ಜನನ ಮತ್ತು ಮರಣ ನೋಂದಣಿ (ಆರ್ ಬಿಡಿ) ಕಾಯ್ದೆ, 1969 (ತಿದ್ದುಪಡಿ 2023) ಅಡಿಯಲ್ಲಿ ಮರಣದ ಕಾರಣದ ವೈದ್ಯಕೀಯ ಪ್ರಮಾಣೀಕರಣ ಯೋಜನೆಯು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಈ ಡೇಟಾವನ್ನು ಒದಗಿಸುತ್ತದೆ
Previous Articleಭಾರತದ ಜೊತೆ ನಾಟಕ ಮಾಡುತ್ತಿದ್ದಾರಾ ಪುತಿನ್?
Next Article ಎಂಇಎಸ್ ಪುಂಡಾಟಿಕೆ ಯತ್ನ

