ಬೆಂಗಳೂರು, ಸೆ.17 – ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವ ವಂಚನೆಯ ಚೈತ್ರಾ ಕುಂದಾಪುರ ಗ್ಯಾಂಗ್ ಮಾಡಿರುವ ಅನಾಹುತ ಅಷ್ಟಿಷ್ಟಲ್ಲ. ವಂಚನೆಯ ಜಾಲದಲ್ಲಿ ಕೆಡವಲು ಈ ಗ್ಯಾಂಗ್ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನ (Saalumarada Thimmakka) ಕಾರನ್ನು ಬಳಸಿರುವ ಸಂಗತಿ ತನಿಖೆಯ ವೇಳೆ ಬಯಲಾಗಿದೆ.
ಬಿಜೆಪಿ ಟಿಕೆಟ್ ಕೊಡಿಸುವ ನಂಬಿಕೆಯನ್ನು ಉದ್ಯಮಿ ಗೋವಿಂದ್ ಬಾಬು ಹುಟ್ಟಿಸಲು ಆರ್ಎಸ್ಎಸ್, ಬಿಜೆಪಿ ಚುನಾವಣಾ ಮುಖ್ಯಸ್ಥರ ವೇಷ ಹಾಕಿಸಿರುವ ಚೈತ್ರಾ ಕುಂದಾಪುರ ಗ್ಯಾಂಗ್ ಸಾಲುಮರದ ತಿಮ್ಮಕ್ಕಗೆ ನೀಡಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಸ್ಫೋಟಕ ಅಂಶ ಬಯಲಿಗೆ ಬಂದಿದೆ.
ಸಾಲುಮರದ ತಿಮ್ಮಕ್ಕನಿಗೆ ನೀಡಿರುವ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ದುರ್ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಾಲುಮರದ ತಿಮ್ಮಕ್ಕಗೆ ಸರ್ಕಾರ ನೀಡಿರುವ ಸರ್ಕಾರಿ ಕಾರು, ಸರ್ಕಾರಿ ಸೌಲಭ್ಯಗಳನ್ನು ಚೈತ್ರಾ, ಗಗನ್ ಗ್ಯಾಂಗ್ ದುರ್ಬಳಕೆ ಮಾಡಿಕೊಂಡಿದೆ.
ನಕಲಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಚನ್ನಾನಾಯ್ಕ್ ಬಳಸಿದ್ದ ಸರ್ಕಾರಿ ಕಾರು ಸಾಲುಮರದ ತಿಮ್ಮಕ್ಕನಿಗೆ ನೀಡಿದ್ದ ಸರ್ಕಾರಿ ಕಾರು ಎಂದು ತಿಳಿದುಬಂದಿದೆ.
ಕುಮಾರ ಕೃಪ ಗೆಸ್ಟ್ ಹೌಸ್ ನಲ್ಲಿ ರೂಮ್ , ವಿಧಾನಸೌಧಕ್ಕೆ ಪ್ರವೇಶಿಸಲು ನಕಲಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಚನ್ನಾನಾಯ್ಕ್ ತಿಮ್ಮಕ್ಕ ಅವರಿಗೆ ನೀಡಿದ್ದ ಸರ್ಕಾರಿ ಕಾರು ಎನ್ನುವುದು ಗೊತ್ತಾಗಿದೆ. ಗೋವಿಂದ ಬಾಬು ಪೂಜಾರಿಯನ್ನ ನಂಬಿಸಲು ಸರ್ಕಾರಿ ಕಾರು ಬಳಕೆ ಮಾಡಿದ್ದಾರೆ ಎಂದು ಎನ್ನಲಾಗಿದೆ.
ಆರೋಪಿ ಗಗನ್ ಕಡೂರು, ಸಾಲುಮರದ ತಿಮ್ಮಕ್ಕನ ಪುತ್ರ ಉಮೇಶ್ ಜೊತೆ ಆತ್ಮೀಯ. ಉಮೇಶ್, ಸಾಲುಮರದ ತಿಮ್ಮಕ್ಕನ ಜೊತೆ ಗಗನ್ ಕಡೂರು ಮದುವೆಗೆ ಬಂದಿದ್ದ. ಅಷ್ಟೊಂದು ಇಬ್ಬರ ಮಧ್ಯೆ ಆತ್ಮಿಯತೆ ಇದೆ. ಹೀಗಾಗಿ ಉಮೇಶ್ ಸ್ನೇಹ ಬಳಸಿ ಸಾಲುಮರದ ತಿಮ್ಮಕ್ಕನಿಗೆ ನೀಡಿರುವ ಸಂಪೂರ್ಣ ದರ್ಜೆ ಸ್ಥಾನಮಾನ ದುರ್ಬಳಕೆ ಮಾಡಿರುವ ಶಂಕಿಸಲಾಗಿದೆ.
ಸಾಲುಮರದ ತಿಮ್ಮಕ್ಕನಿಗೆ (Saalumarada Thimmakka) ನೀಡಿರುವ ಕೊಠಡಿಯ ನವೀಕರಣದ ಸಂಪೂರ್ಣ ಜವಾಬ್ದಾರಿಯನ್ನು ಗಗನ್ ಕಡೂರು ಹೊತ್ತುಕೊಂಡಿದ್ದ. ಅಲ್ಲದೇ ಸಾಲುಮರದ ತಿಮ್ಮಕ್ಕ ಪುತ್ರ ಉಮೇಶ್, ಗೃಹ ಸಚಿವ ಜಿ.ಪರಮೇಶ್ವರ್ಗೆ ಆಪ್ತರಾಗಿದ್ದು, ಕಳೆದ ಚುನಾವಣೆಯಲ್ಲಿ ಅವರ ಪ್ರಚಾರ ಮಾಡಿದ್ದರು. ಗಗನ್ ಸಹ ಪರಮೇಶ್ವರ್ ಪರ ಚುನಾವಣಾ ಪ್ರಚಾರಕ್ಕೂ ಉಮೇಶ್ ಜೊತೆ ತೆರಳಿದ್ದ ಎನ್ನುವುದು ಗೊತ್ತಾಗಿದೆ.