ಶ್ರವಣಬೆಳಗೊಳ – ಜೈನ ಧರ್ಮೀಯರ ಪವಿತ್ರ ಯಾತ್ರಾ ಸ್ಥಳ ಶ್ರವಣಬೆಳಗೊಳ ಎಂದರೆ ತಟ್ಟನೆ ನೆನಪಾಗುವುದು
ಬೆಟ್ಟದ ಮೇಲೆ ಆಗಸದೆತ್ತರಕ್ಕೆ ತಲೆ ಎತ್ತಿ ನಿಂತಿರುವ ವೈರಾಗ್ಯ ಮೂರ್ತಿಯ ಬೃಹತ್ ಪ್ರತಿಮೆ ಹಾಗೂ ಇದರ ಜೊತೆ ನೆನಪಾಗುವ ಇನ್ನೋರ್ವ ಚೇತನ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ.
ಶ್ರವಣಬೆಳಗೊಳದ ಜಿನ ಪೀಠಕ್ಕೆ ಬಂದು ಅರ್ಧ ಶತಮಾನವೇ ಆಗುತ್ತಿದ್ದರೂ ಅವರೆಂದು ನಕರಾತ್ಮಕ ಕಾರಣಕ್ಕೆ ಸುದ್ದಿಯಾದವರಲ್ಲ. ಯಾವುದೇ ಚರ್ಚೆ ಟೀಕೆಗೆ ಗುರಿಯಾದವರಲ್ಲ. ಟಿವಿ ಡಿಬೆಟ್‌ಗಳಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ. ಇವರು ಟಿವಿಯಲ್ಲಿ ಕಾಣಿಸುತ್ತಿದ್ದಿದ್ದು ಕೇವಲ ಮಹಾಮಸ್ತಾಕಾಭಿಷೇಕದ ಸಮಯದಲ್ಲಿ ಮಾತ್ರ. ಮತ್ತೊಮ್ಮೆ ಈ ಸ್ವಾಮೀಜಿಯವರನ್ನು ನೋಡಲು ಮತ್ತೆ 12 ವರ್ಷಗಳೇ ಕಾಯಬೇಕಾಗಿರುತ್ತಿತ್ತು.
ಸಹಸ್ರಾರು ಭಕ್ತರ ಆರಾಧ್ಯ ದೈವ, ಮಾರ್ಗದರ್ಶಿ ಇನ್ನೂ ಕೇವಲ ನೆನಪು ಮಾತ್ರ.
ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯರಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಬೆಳ್ಳೂರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರ ವಿಧಿವಶರಾಗಿದ್ದಾರೆ.ಅನಾರೋಗ್ಯದ ಹಿನ್ನೆಲೆ ಅವರನ್ನು ಆಯಂಬುಲೆನ್ಸ್ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.
ಶ್ರೀಗಳು ತೀವ್ರ ಹೃದಯಾಘಾತದಿಂದ ಇಹಲೋಕ ಯಾತ್ರೆ ಮುಗಿಸಿದರು ಎಂದು ಹೇಳಲಾಗಿತ್ತು.ಆದರೆ ಇವರ ಸಾವಿಗೆ ಹೃದಯಾಘಾತ ಕಾರಣವಲ್ಲ ಎಂಬ ಮಾಹಿತಿ ಹೊರಬಂದಿದೆ.
ಸ್ವಾಮೀಜಿಯವರು ಬೆಳಗ್ಗೆ ನಿತ್ಯ ಕರ್ಮಕ್ಕೆ ಎದ್ದಾಗ ಕಾಲುಜಾರಿ ಬಿದ್ದು ಶ್ರೀಗಳ ಸಾವು ಸಂಭವಿಸಿದೆ. ಕಾಲು ನೋವಿನಿಂದ ಬಳಲುತ್ತಿದ್ದ ಶ್ರೀಗಳು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಅನಾಹುತವಾಗಿದೆ. ಬಿದ್ದಾಗ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ತೀವ್ರ ಗಾಯಗೊಂಡ ಶ್ರೀಗಳನ್ನು ಮಠದ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾದ್ದರಿಂದ ಚಿಕಿತ್ಸೆ ಫಲಿಸದೆ ಶ್ರೀಗಳು ಮೃತಪಟ್ಟಿದ್ದಾರೆʼʼ ಎಂದು ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದ್ದಾರೆ.
ಶ್ರೀಗಳ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೂ ಕೆಲವು ನಿಮಿಷಗಳ ಮೊದಲು ಜಿಲ್ಲಾಧಿಕಾರಿಗಳು ಈ ಮಾಹಿತಿ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ!
Previous Articleರಾಹುಲ್ ಗಾಂಧಿ Disqualified
Next Article Ultraviolet ಕಿರಣಗಳಿವೆ ಎಚ್ಚರ! #bangalore #skincancer

