ಚೆನ್ನೈ: ಹಿಂದೂ ಸಮಾಜದಲ್ಲಿ ಮದುವೆ ವೇಳೆ ಕಟ್ಟುವ ಮಂಗಲಸೂತ್ರಕ್ಕೆ ಅದರದ್ದೇ ಆದ ಧಾರ್ಮಿಕ ಮಹತ್ವ ಇದೆ. ಗೃಹಿಣಿ ಪತಿ ಬದುಕಿರುವ ತನಕ ಮಂಗಲಸೂತ್ರವನ್ನು ಕುತ್ತಿಗೆಯಿಂದ ತೆಗೆಯುವುದಿಲ್ಲ.
ಇದೀಗ ಅದೇ ಮಂಗಲ ಸೂತ್ರಧಾರಣೆ ಕುರಿತಂತೆ ಮದ್ರಾಸ್ ಹೈಕೋರ್ಟ್ ತೀರ್ಪು ನೀಡುವ ವೇಳೆ ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದೆ.
ಗೃಹಿಣಿ ಮಂಗಲಸೂತ್ರ ಧರಿಸದೆ ಅದನ್ನು ತೆಗೆದಿರಿಸಿದರೆ ಅದು ಪತಿಗೆ ನೀಡುವ ಮಾನಸಿಕ ಹಿಂಸೆಯ ಅತೀವ ಕ್ರೌರ್ಯ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ವಿ.ಎಂ. ವೇಲುಮಣಿ ಮತ್ತು ಎಸ್. ಸೌಂದರ್ ಅವರನ್ನು ಒಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.
ಈರೋಡ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿರುವ ಶಿವಕುಮಾರ್ ಎಂಬುವರ ವಿವಾಹ ವಿಚ್ಛೇದನ ತೀರ್ಪು ನೀಡುವ ವೇಳೆ ಮದ್ರಾಸ್ ಹೈಕೋರ್ಟ್ ಈ ಅಂಶ ಪ್ರಸ್ತಾಪಿಸಿದೆ.
ಈ ಹಿಂದೆ ಕೌಟುಂಬಿಕ ನ್ಯಾಯಾಲಯ ವಿವಾಹ ವಿಚ್ಛೇದನ ನೀಡಲು ನಿರಾಕರಿಸಿತ್ತು. ಇದನ್ನು ಶಿವಕುಮಾರ್ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ತಾಳಿ ತೆಗೆದಿರಿಸುವ ಮೂಲಕ ವೈವಾಹಿಕ ಸಂಬಂಧ ಮುಂದುವರಿಸುವ ಇಚ್ಚೆ ತನಗಿಲ್ಲ ಎಂಬುದನ್ನು ಪತ್ನಿ ಸೂಚಿಸಿದ್ದಾಳೆ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ. ಇದೀಗ ವಿವಾಹ ವಿಚ್ಛೇದನ ನೀಡಿದೆ
ಪತ್ನಿ ಮಂಗಲಸೂತ್ರ ಧರಿಸದಿರುವುದು ಪತಿಗೆ ನೀಡಬಹುದಾದ ಅತೀವ ಮಾನಸಿಕ ಹಿಂಸೆ: ಮದ್ರಾಸ್ ಹೈಕೋರ್ಟ್
Previous Articleಅಪ್ರಾಪ್ತೆ ಅಪಹರಿಸಿ ಚಲಿಸುವ ಕಾರಿನಲ್ಲಿ ಗ್ಯಾಂಗ್ ರೇಪ್
Next Article ರಾಜಭವನ ತಲುಪಿದ ಸಂತೋಷ್ ಸಾವು ಪ್ರಕರಣ..