ರಾಜ್ಯ ರಾಜಕಾರಣದಲ್ಲಿ ವೈ ಎಸ್ ವಿ ದತ್ತ ತಮ್ಮದೇ ಆದ ವೈಶಿಷ್ಟ್ಯಗಳಿಂದ ಚಿರಪರಿಚಿತರು.ಆಪ್ತ ವಲಯದಲ್ಲಿ ಮೇಷ್ಟ್ರು ಎಂದೆ ಪ್ರೀತಿಯಿಂದ ಕರೆಸಿಕೊಳ್ಳುವ ದತ್ತ,ಮಾಜಿ ಪ್ರಧಾನಿ ದೇವೇ ಗೌಡ ಅವರ ಮಾನಸ ಪುತ್ರ ಎಂದೆ ಪರಿಗಣಿಸಲ್ಪಡುತ್ತಾರೆ.
ದತ್ತ ಅವರು, ಮಾಜಿ ಪ್ರಧಾನಿ ದೇವೇಗೌಡರ ಯಶಸ್ಸಿನ ಸೂತ್ರದಾರ ಎಂದು ಗುರುತಿಸಲ್ಪಡುತ್ತಾರೆ. ದೇವೇಗೌಡರ ಗರಡಿಯಲ್ಲಿ ಉತ್ತಮ ರಾಜಕಾರಣಿಯಾಗಿ ಪಳಗಿರುವ ದತ್ತ ಅತ್ಯುತ್ತಮ ಸಂಸದೀಯ ಪಟು. ಒಮ್ಮೆ ವಿಧಾನಪರಿಷತ್ ಸದಸ್ಯರಾಗಿ, ಮತ್ತೊಮ್ಮೆ ವಿಧಾನಸಭೆಯ ಸದಸ್ಯರಾಗಿ, ಶಾಸನಸಭೆಯ ಕಲಾಪದಲ್ಲಿ ಜನಪರ ನಿಲುವಿನ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ.
ಜೆಡಿಎಸ್ ನ ಕುಟುಂಬ ಸದಸ್ಯರಾಗಿದ್ದ ದತ್ತ ಆ ಪಕ್ಷದ ಕೆಲವು ಮುಖಂಡರ ಧೋರಣೆಯಿಂದ ಬೇಸತ್ತು ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ನಿಂದ ಕಡೂರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ಆದರೆ, ಕಾಂಗ್ರೆಸ್ ಇವರಿಗೆ ಟಿಕೆಟ್ ನೀಡಲಿಲ್ಲ. ಇದರಿಂದ ಬೇಸತ್ತ ಅವರು ಮತ್ತೆ ದೇವೇಗೌಡರಿಗೆ ಸಖ್ಯಕ್ಕೆ ಬಂದಿದ್ದಾರೆ. ಇದೀಗ ಜೆಡಿಎಸ್ ನಿಂದ ಕಡೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ನಾಮಪತ್ರ ಸಲ್ಲಿಸಿದ್ದಾರೆ. ಅವರ ನಾಮಪತ್ರ ಅಂಶಗಳು ಇದೀಗ ಜನರ ಗಮನ ಸೆಳೆದಿವೆ.
ಇವರ ವಿರುದ್ಧ ಕರ್ನಾಟಕ ಮತ್ತು ರಾಜ್ಯದ ಹೊರಗಡೆ ವಿವಿಧ ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ 6 ಪ್ರಕರಣ, 22 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಮೂರು, 42ನೇ ಎಸಿಎಂಎಂ ನ್ಯಾಯಾಲಯದಲ್ಲಿ 6 ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಎಸಿಎಂಎಂ 12, 15,18, 19, 23, 26, 36ನೇ ನ್ಯಾಯಾಲಯಗಳಲ್ಲಿ ತಲಾ ಒಂದು,
ಬೆಂಗಳೂರಿನ ಎಸ್‌ಸಿಸಿಎಚ್ 6ನೇ ಮತ್ತು 8ನೇ ನ್ಯಾಯಾಲಯಗಳಲ್ಲಿ ತಲಾ ಒಂದು, ಮಂಗಳೂರಿನ ಜೆಂಎಫ್‌ಸಿ ನ್ಯಾಯಾಲಯದಲ್ಲಿ 5 ಮತ್ತು 4ನೇ ಜೆಎಂಎಫ್‌ಸಿಯಲ್ಲಿ 3 ಪ್ರಕರಣ, ಅಥಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಎರಡು, ಹಾಸನ ನ್ಯಾಯಾಲಯದಲ್ಲಿ ಎರಡು, ಹಾಸನ ಜಿಲ್ಲೆ ಬೇಲೂರು, ಹುಬ್ಬಳ್ಳಿ, ಗದಗ ನ್ಯಾಯಾಲಯಗಳಲ್ಲಿ ತಲಾ ಒಂದು. ಅನಂತಪುರ ನ್ಯಾಯಾಲಯದಲ್ಲಿ ಒಂದು, ಗುಂತಕಲ್ ನ್ಯಾಯಾಲಯದಲ್ಲಿ ಮೂರು ಪ್ರಕರಣ ದಾಖಲಾಗಿವೆ.
ಚೆಕ್ ನಗದು ಆಗದಿರುವ ಕಾರಣ ಈ ಎಲ್ಲ ಪ್ರಕರಣಗಳು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ಎನ್‌ಐ) ಕಾಯ್ದೆ 1881 ರ ಕಲಂ 138ರ ಅಡಿಯಲ್ಲಿ ದಾಖಲಾಗಿವೆ. 2014ರಿಂದ 2020 ಅವಧಿಯಲ್ಲಿ ಈ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ.ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಮಾಹಿತಿ ಇದೆ
Previous Articleಅದೃಷ್ಟದ ಬೆನ್ನೇರಿ ಶೆಟ್ಟರ್ ಸವಾರಿ… | Shetter |
Next Article ದರ್ಶನ್ ಬಂದರೂ ಜನ ಬರಲಿಲ್ಲ | Darshan | DBoss