ಮುಂಬೈ(ಮಹಾರಾಷ್ಟ್ರ): ಮೊದಲ ದಿನ ಶಾಲೆಗೆ ಹೋಗುವ ಸಂಭ್ರಮದಲ್ಲಿ ಟೆರೇಸ್‌ನಲ್ಲಿ ಕುಣಿದಾಡುತ್ತಿದ್ದ ಮಗುವೊಂದು ಆಯತಪ್ಪಿ ಬಿದ್ದು ಮೃತಪಟ್ಟಿದೆ.
ಪಶ್ಚಿಮ ಥಾಣೆಯ ಪಂಚಪಖಾಡಿ ಪ್ರದೇಶದಲ್ಲಿರುವ ಗೀತಾ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ.
ಐದನೇ ಮಹಡಿಯಲ್ಲಿದ್ದ ಟೆರಸ್ನಿಂದ ಬಿದ್ದು ನಾಲ್ಕು ವರ್ಷದ ಮಗು ಶ್ಲೋಕ್ ಮಾತ್ರೆ ಮೃತಪಟ್ಟಿದೆ.
ಮಗು ಟೆರೇಸ್‌ನಲ್ಲಿ ಆಟವಾಡುತ್ತಿತ್ತು. ಟೆರೇಸ್ನಿಂದ ಕೆಳಗೆ ನೋಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ಲೋಕ್ ಮಾತ್ರೆ ಮೊದಲ ಬಾರಿಗೆ ಶಾಲೆಗೆ ತೆರಳುವ ಹುಮ್ಮಸ್ಸಿನಲ್ಲಿ ಟೆರೇಸ್ನಲ್ಲಿ ಕುಣಿದಾಡುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಶಾಲೆಗೆ ಹೋಗುವ ಹುಮ್ಮಸ್ಸು: ಟೆರೇಸ್‌ನಿಂದ ಬಿದ್ದು ಬಾಲಕ ಸಾವು
Previous Articleಅಕ್ರಮ ಸಂಬಂಧ: ವಿವಾಹಿತ ಪುರುಷ, ಯುವತಿಯ ಬೆತ್ತಲೆ ಮೆರವಣಿಗೆ
Next Article ಹೊರಟ್ಟಿ ಗೆಲುವು: ಬಿಜೆಪಿಯಿಂದ ಸಂಭ್ರಮಾಚರಣೆ