ಬೆಂಗಳೂರು,
ನೆನೆಗುದಿಗೆ ಬಿದ್ದಿರುವ ನಿಗಮ ಮಂಡಳಿಗಳ ನೇಮಕಾತಿ ವಿಧಾನ ಪರಿಷತ್ ಸದಸ್ಯರ ನಾಮಕರಣ ಸೇರಿದಂತೆ ಹಲವಾರು ವಿಚಾರಗಳು ಆಡಳಿತರೂಡ ಕಾಂಗ್ರೆಸ್ ನಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಸಿದೆ.
ಇದನ್ನು ಬಗೆಹರಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೇವಾಲಾ ಮತ್ತು ವೇಣುಗೋಪಾಲ ಸೇರಿದಂತೆ ಹಲವು ನಾಯಕರು ಅನೇಕ ಬಾರಿ ಪ್ರಯತ್ನ ನಡೆಸಿದರು ಕೂಡ ಬಗೆಹರಿದಿಲ್ಲ.
ಹೀಗಾಗಿ ಬಿಕ್ಕಟ್ಟು ಬಗೆಹರಿಸಲು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮೊರೆ ಹೋಗಲಾಗಿದೆ ನೇಮಕಾತಿಗಳು ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಹಲವು ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ರಾಹುಲ್ ಗಾಂಧಿ ಆಗಸ್ಟ್ ಒಂದರಂದು ಸಭೆ ಕರೆದಿದ್ದಾರೆ.
ರಾಹುಲ್ ಗಾಂಧಿ ಅವರ ಬೇಟಿಗಾಗಿ ಮೂರು ಬಾರಿ ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೂರು ಬಾರಿಯೂ ಅವರ ಭೇಟಿ ಸಾಧ್ಯವಾಗದೆ ಹಿಂತಿರುಗಿದ್ದಾರೆ.
ಇದೀಗ ನಾಲ್ಕನೇ ಬಾರಿ ರಾಹುಲ್ ಗಾಂಧಿ ಸಿಎಂ ಮತ್ತು ಡಿಸಿಎಂ ಜೊತೆ ಮಾತುಕತೆಗೆ ಸಮ್ಮತಿಸಿದ್ದಾರೆ ಹೀಗಾಗಿ ಜುಲೈ 31ರಂದು ಮತ್ತೆ ದೆಹಲಿಗೆ ತೆರಳುತ್ತಿರುವ ಉಭಯ ನಾಯಕರು ಆಗಸ್ಟ್ ಒಂದರಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಲಿದ್ದಾರೆ.
ಈ ಮಾತುಕತೆಯ ನಂತರ ನಿಗಮ ಮಂಡಳಿ ನೇಮಕಾತಿ ಮತ್ತು ವಿಧಾನ ಪರಿಷತ್ತಿನ ನಾಲ್ಕು ಸದಸ್ಯರ ನಾಮಕರಣ ಕುರಿತ ಬಿಕ್ಕಟ್ಟು ಇತ್ಯರ್ಥ ಗೊಳ್ಳುವ ಸಾಧ್ಯತೆ ಇದೆ.
ಇವುಗಳ ಜೊತೆಗೆ ಉಭಯ ನಾಯಕರು ಅಧಿಕಾರ ಹಸ್ತಾಂತರ ಮಂತ್ರಿಗಳ ಕಾರ್ಯವೈಖರಿ ಶಾಸಕರ ಅಸಮಾಧಾನ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದು ಎಲ್ಲದಕ್ಕೂ ಒಂದು ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಹೇಳಲಾಗುತ್ತಿದೆ
Previous Articleರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?
Next Article ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?