ಬೆಂಗಳೂರು, ಜು.6:
ರಾಜ್ಯ ಕಾಂಗ್ರೆಸ್ ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಮವಾಗಿರುವ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮತ್ತು ನಾಯಕತ್ವ ಬದಲಾವಣೆಯ ಯಾವುದೇ ವಿಷಯದ ಬಗ್ಗೆ ಮಾತನಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಈ ಕುರಿತಾದ ಚರ್ಚೆಯಲ್ಲಿ ನಾನು ಪಾಲ್ಗೊಳ್ಳುವುದಿಲ್ಲ.
‘ಕಾಂಗ್ರೆಸ್ ಒಂದು ಶಿಸ್ತಿನ ಪಕ್ಷ, ನಾನು ಶಿಸ್ತಿನ ಸಿಪಾಯಿ .ಸಿಎಂ ಬದಲಾವಣೆ ಮತ್ತು ಹೆಚ್ಚುವರಿ ಡಿಸಿಎಂ ಚರ್ಚೆ ವಿಚಾರ ಬಿಟ್ಟು ಬೇರೆ ವಿಚಾರ ಕೇಳಿ ಎಂದರು.
ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಇಲ್ಲಿಯವರೆಗೆ ಮೊಟ್ಟೆ ವಿತರಣೆ ಮಾಡಲು ಸಾಧ್ಯವಾಗಿಲ್ಲ. ಮೊಟ್ಟೆ ವಿತರಣೆಗೆ ಸರ್ಕಾರ ಹಣ ನೀಡಲು ವಿಳಂಬವಾಗಿದೆ.ಇದಕ್ಕೆ ನಾನಾ ಕಾರಣಗಳಿವೆ. ಮಾರ್ಕೆಟ್ ದರ ಮತ್ತು ಸರ್ಕಾರ ಕೊಡುವ ದರದಲ್ಲಿ ವ್ಯತ್ಯಾಸವಿದೆ.ಇದರಲ್ಲಿ ಸಾಗಾಣಿಕೆ ದರದ ವಿಚಾರ ಸೇರಿಕೊಂಡಿದೆ. ಸ್ವಲ್ಪ ಗೊಂದಲವಿದೆ. ಡಿಡಿ ಮತ್ತು ಸಿಡಿಪಿಓ ಅಧಿಕಾರಿಗಳನ್ನ ಸಭೆ ಕರೆದು ಗೊಂದಲ ಬಗೆ ಹರಿಸುತ್ತೆವೆ ಎಂದು ವಿವರಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗಳನ್ನು ಹೊರತುಪಡಿಸಿ ಇತರೆ ವರ್ಗದ ಫಲಾನುಭವಿಗಳಿಗೆ ಜೂನ್ , ಜುಲೈ ಮಾತ್ರ ಗೃಹಲಕ್ಷ್ಮಿ ಹಣ ಸಂದಾಯವಾಗಿಲ್ಲ.ಶೀಘ್ರದಲ್ಲೇ ಡಿಬಿಟಿ ಮೂಲಕ ಅದನ್ನ ಹಾಕುತ್ತೆವೆ. ಜೂನ್ ತಿಂಗಳದ್ದು ಇನ್ನೇರಡು ದಿನದಲ್ಲಿ ಬರಲಿದೆ. ಜುಲೈ ತಿಂಗಳದ್ದು 15 ನೇ ತಾರೀಖಿನ ನಂತರ ಬರಲಿದೆ’ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳ ಹೆಸರು ಬದಲಾಯಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಂಗನವಾಡಿ ಕೇಂದ್ರ ಮೇಲ್ದರ್ಜೆಗೆರಿಸುವ ಮೂಲಕ ಹೆಸರು ಬದಲಾವಣೆ ಮಾಡುತ್ತೇವೆ. ಅಂಗನವಾಡಿಗಳಲ್ಲಿ ಡಿಗ್ರಿ ಹೋಲ್ಟಡ್ಸ್, ಮಾಸ್ಟರ್ ಡಿಗ್ರಿ ಹೋಲ್ಡಸ್ ಇದ್ದಾರೆ.ಸರ್ಕಾರಿ ಮೌಂಟಸರಿ ಮಾಡಬೇಕು ಅಂತಾ ತೀರ್ಮಾನ ಮಾಡಿದ್ದು, ಸಿಎಂ ಕೂಡ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ’ ಎಂದರು.
Previous Articleಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕು.
Next Article ದರ್ಶನ್ ಕೇಸಲ್ಲಿ ಶಾಸಕರ ಕಾರು ಚಾಲಕನಿಗೂ ಆಪತ್ತು

1 ಟಿಪ್ಪಣಿ
Это генератор картинок, который выдаёт впечатляюще реалистичные результаты уже с первого запроса! Официальный сайт – https://gen.new/