ಬೆಂಗಳೂರು, ಫೆ.7-
ರಾಜ್ಯದ ಎಲ್ಲಾ CNG ವಾಹನ ಮಾಲೀಕರು ತಮ್ಮ ವಾಹನಗಳ ಸಿಲಿಂಡರ್ ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಕಳೆದ ಜ.9 ರಂದು ಹೊರಡಿಸಲಾದ ಈ ಸುತ್ತೋಲೆಯು CNG ವಾಹನಗಳಿಗೆ ರಾಷ್ಟ್ರೀಯ ಮಾರ್ಗಸೂಚಿಗಳ ಅನುಗುಣವಾಗಿದೆ.
ವಾಹನ ಮಾಲೀಕರು ಮೂರು ವರ್ಷಗಳಿಗೊಮ್ಮೆ ಪ್ರತಿಯೊಂದು ಸಿಲಿಂಡರ್ ಅನ್ನು “ಹೈಡ್ರೋಸ್ಟಾಟಿಕ್ ಸ್ಟ್ರೆಚ್” (Hydrostatic Stretch Testing) ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯ ಎಂದು ಸುತ್ತೋಲೆ ತಿಳಿಸಿದೆ. ಗ್ಯಾಸ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL), ರಾಜ್ಯದ ಅತಿದೊಡ್ಡ ಸಿಎನ್ ಜಿ ಪೂರೈಕೆದಾರರಾಗಿದ್ದು ಇದು ಕರ್ನಾಟಕದಲ್ಲಿ 52,000 ಸಿಎನ್ ಜಿ ವಾಹನಗಳಿವೆ ಎಂದು ಅಂದಾಜಿಸಿದೆ. ಅದರಲ್ಲಿ ಶೇ 48 ಅಥವಾ ಸುಮಾರು 25,000 ವಾಹನಗಳು ಬೆಂಗಳೂರಿನಲ್ಲಿವೆ. ಈ ಮಾಹಿತಿ ಆಫ್ಟರ್ ಮಾರ್ಕೆಟ್ ನಲ್ಲಿ ಸಿಎನ್ ಜಿ ಸಿಲಿಂಡರ್ ಗಳನ್ನು ಅಳವಡಿಸಿದ ವಾಹನಗಳು ಮತ್ತು ಜಿಎಐಎಲ್ ನಿಂದ ಸರಬರಾಜು ಮಾಡಲಾದ ವಾಹನಗಳನ್ನು ಒಳಗೊಂಡಿದೆ.
ಈ ಪರೀಕ್ಷೆಗಳನ್ನು ನಡೆಸಲು ಸರ್ಕಾರವು ಬೆಂಗಳೂರು ಮೂಲದ ಸಂಸ್ಥೆ-ಎಂಜಿ ಆರ್ ಹೈಡ್ರೋಟೆಸ್ಟ್ ಇಂಕ್ (MGR Hydrotest Inc.) ಅನ್ನು ಅಧಿಕೃತವಾಗಿ ನೇಮಿಸಿದೆ. ಅದೇ ರೀತಿ ಶೀಘ್ರದಲ್ಲೇ ಇನ್ನೆರೆಡು ಕಂಪೆನಿಗಳು ಈ ಪರೀಕ್ಷೆಗಳನ್ನು ನಡೆಸಲು ಅಧಿಕಾರವನ್ನು ಪಡೆಯಲಿವೆ. ಎಂಜಿಆರ್ ಹೈಡ್ರೊಟೆಸ್ಟ್ PESO (ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ)ಯಿಂದ ಸಂಬಂಧಿತ ಪ್ರಮಾಣಿಕರಣಗಳನ್ನು ಹೊಂದಿದೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ಸಿಲಿಂಡರ್ ಗಳ ಹೈಡ್ರೋಸ್ಟಾಟಿಕ್ ಸ್ಟ್ರೆಚ್ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ. ಈ ಕುರಿತು ಸಾರಿಗೆ ಇಲಾಖೆಯ ಸುತ್ತೋಲೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ‘ಸಿಎನ್ ಜಿ ವಾಹನಗಳ ಕನ್ವರ್ಷನ್ ಹಾಗೂ ಹೊಸ ನೋಂದಣಿ ಹೆಚ್ಚಾದಂತೆ, ಸುರಕ್ಷತೆಯ ಕಾಳಜಿಯನ್ನು ತಿಳಿಸುವ ಅಗತ್ಯವಿದೆ’ ಎಂದು ಎಂಜಿಆರ್ ಹೈಡ್ರೊಟೆಸ್ಟ್ ನ ವ್ಯವಸ್ಥಾಪಕ ಪಾಲುದಾರ ಜ್ಞಾನಚಂದ್ ಬಾಂಟಿಯಾ ತಿಳಿಸಿದ್ದಾರೆ.
3 ಪ್ರತಿಕ್ರಿಯೆಗಳು
индийский пасьянс гадать индийский пасьянс гадать .
снятие ломки нарколог снятие ломки нарколог .
саженцы и семена интернет магазин саженцы и семена интернет магазин .