ಬೆಂಗಳೂರು,ಜ.5- ರಾಜಧಾನಿ ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್ ನೀಡಿದ ಊಟದಲ್ಲಿ ಜಿರಲೆ (Cockroach) ಪತ್ತೆಯಾಗಿದೆ.
ತಮಗೆ ಸೇವಿಸಲು ನೀಡಿದ ಪದಾರ್ಥದಲ್ಲಿ ಇದನ್ನು ಕಂಡ ಕೂಡಲೆ ಕೆಂಡಾಮಂಡಲರಾದ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ವಕೀಲೆಯೊಬ್ಬರು ನಿನ್ನೆ ಸಂಜೆ ನಗರದ ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್‌ಗೆ ತೆರಳಿ ಊಟಕ್ಕೆ ತೆರಳಿದ್ದರು. ಅವರು ಅಲ್ಲಿ ರೊಟ್ಟಿ ಹಾಗೂ ಪನ್ನೀರ್ ಗ್ರೇವಿ ಆರ್ಡರ್ ಮಾಡಿದರು. ಹೋಟೆಲ್ ಸಿಬ್ಬಂದಿ ತಂದುಕೊಟ್ಟ ಊಟದಲ್ಲಿ ಒಂದೆರಡು ತುತ್ತು ತಿಂದು ಮತ್ತೆ ನೋಡಿದಾಗ ಪನ್ನೀರ್ ಗ್ರೇವಿಯಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ
ಜಿರಳೆ ಪತ್ತೆಯಾದ ಕೂಡಲೇ ಹೊಟೆಲ್ ಸಿಬ್ಬಂದಿಯನ್ನ ವಕೀಲೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ‘ಬೇರೆ ಊಟ ನೀಡುವುದಾಗಿ’ ಗ್ರಾಹಕರಿಗೆ ಮನವರಿಕೆ ಮಾಡಿಕೊಂಡಿದ್ದಾರೆ. ಆಗ ವಕೀಲರು ಅದಕ್ಕಿಂತ ಮೊದಲು ನಿಮ್ಮ ಅಡುಗೆ ಕೋಣೆ ನೋಡುವುದಾಗಿ ಹೇಳಿ ಒಳಗೆ ಹೋಗಿದ್ದಾರೆ.
ಅಲ್ಲಿನ ದೃಶ್ಯ ಕಂಡು ಬೆಚ್ಚಿದ ಅವರು ಇದಕ್ಕಿಂತಲೂ ಬೀದಿ ಬದಿಯ ಹೋಟೆಲ್‌ಗಳು ಲೇಸು’ ಎಂದಿದ್ದಲ್ಲದೆ ಸಂಪೂರ್ಣ ಅಡುಗೆ ಕೋಣೆ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.
ಬಳಿಕ ವಕೀಲೆ ಈ ಘಟನೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ
ALSO READ | Latest Kannada News | Bengaluru news in Kannada