ದುಬಾರಿಯಾಗೋಯ್ತು ಜೀವನ..ಇನ್ನು ಮುಂದೆ ನಿಮ್ಮ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ ಅದು ಯಾಕಂದರೆ ಪೆಟ್ರೋಲ್,ಡೀಸೆಲ್,ಅಡುಗೆ ಅನಿಲ ಖಾದ್ಯ ತೈಲವಷ್ಟೇ ಅಲ್ಲ ನಿತ್ಯ ಬಳಸುವ ಗೃಗಪಯೋಗಿ ವಸ್ತುಗಳ ಬೆಲೆಯೂ ಹೆಚ್ಚಳವಾಗಲಿದ್ದು ಜೀವನ ದುಬಾರಿಯಾಗಲಿದೆ.
ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ದದ ಪರಿಣಾಮ ಹಲವಾರು ಸಮಸ್ಯೆಗಳನ್ನು ಜಗತ್ತು ಎದುರಿಸುತ್ತಿದೆ.ಭಾರತಕ್ಕಂತು ಇದು ದೊಡ್ಡ ಸವಾಲಾಗಿದೆ.ಯುದ್ಧದ ಪರಿಣಾಮಗಳನ್ನು ಎದುರಿಸುವ ದೃಷ್ಟಿಯಿಂದ ರಿಸರ್ವ್ ಬ್ಯಾಂಕ್ ಘೋಷಿಸಿದ ಸಾಲ ನೀತಿ ರೆಪೋದರ ಹೆಚ್ಚಳದ ಪರಿಣಾಮ ಗೃಹಪಯೋಗಿ ದಿನ ನಿತ್ಯ ಬಳಕೆಯ ವಸ್ತುಗಳು ದುಬಾರಿಯಾಗಲಿವೆ.
ದೇಶದ ಅತಿದೊಡ್ಡ ಗೃಹಪಯೋಗಿ ಉತ್ಪನ್ನಗಳ ತಯಾರಿಕೆ ಸಂಸ್ಥೆ ಹಿಂದೂಸ್ಥಾನ್ ಯೂನಿಲಿವರ್ ತನ್ನ ಎಲ್ಲಾ ಉತ್ಪನ್ನಗಳ ಬೆಲೆಯನ್ನು ಶೇ.8 ರಿಂದ ಶೆ.15 ರಷ್ಟು ಹೆಚ್ಚಳ ಮಾಡಿದೆ.ಇದರ ಪರಿಣಾಮ ಪಿಯರ್ಸ್,ಲಕ್ಸ್, ಡವ್ ಸೇರಿದಂತೆ ಮೈ ಸೋಪು,ಶಾಂಪೂ,ಬಟ್ಟೆ ತೊಳೆಯುವ ಸಾಬೂನು ಸೇರಿದಂತೆ ಎಲ್ಲಾ ಉತ್ಪನ್ನಗಳ ಬೆಲೆ ಎಂಟರಿಂದ ಹತ್ತು ರೂಪಾಯಿಯಷ್ಷು ಹೆಚ್ಚಳವಾಗಲಿದೆ.
ಸಾಬೂನು ಮತ್ತು ಸಾಬೂನು ಉತ್ಪನ್ನಗಳ ತಯಾರಿಕೆಗೆ ತಾಳೆ ಎಣ್ಣೆಯನ್ನು ಬಳಸಲಾಗುತ್ತದೆ. ಯುದ್ದದ ಪರಿಣಾಮ ಖಾದ್ಯ ತೈಲ ಆಮದು ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಇದರ ಜೊತೆಗೆ ಇಂಡೋನೇಷ್ಯಾ ತಾಳೆಎಣ್ಣೆ ರಪ್ತು ನಿಷೇಧಿಸಿದೆ ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ತಾಳೆಎಣ್ಣೆ ದುಬಾರಿಯಾಗಿದೆ.
ಇದು ಸಾಬೂನು ಮತ್ತು ಸಾಬೂನು ಉತ್ಪನ್ನಗಳ ಮೇಲೂ ಪರಿಣಾಮ ಬೀರಿದೆ ಗಾಯದ ಮೇಲೆ ಬರೆ ಎಳೆದಂತೆ ಆರ್ ಬಿಐ ಕಳೆದ ಬುಧವಾರ ಪ್ರಕಟಿಸಿದ ಹಣಕಾಸು ನೀತಿಯಿಂದಾಗಿ ಬಡ್ಡಿ ದರ ಹೆಚ್ಚಳಗೊಂಡಿದ್ದು,ಹಣದುಬ್ಬರವೂ ಹೆಚ್ಚಿದೆ ಇದರಿಂದ ಗೃಹಪಯೋಗಿ ನಿತ್ಯ ಬಳಕೆ ವಸ್ತುಗಳ ಬೆಲೆ ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
Previous Articleಕೊನೆಯ ಓವರ್‌ನಲ್ಲಿ ಗುಜರಾತ್‌ಗೆ ನೀರು ಕುಡಿಸಿದ ಮುಂಬೈ
Next Article ಅಪಘಾತ-ಮೂವರ ದುರ್ಮರಣ