ಬೆಂಗಳೂರು: ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಭಾರತ ಮತ್ತು ಜರ್ಮನಿಯ ಸಹಕಾರ ವೃದ್ಧಿಸುವುದಕ್ಕಾಗಿ ಭಾರತಕ್ಕೆ ಭೇಟಿ ನೀಡಿರುವ ಜರ್ಮನಿ ತಂಡವು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ನಮ್ಮ ಬೆಂಗಳೂರು ಮೆಟ್ರೋವನ್ನು ನೋಡಿ ಅವರು ಬಹಳ ಸಂತೋಷ ವ್ಯಕ್ತಪಡಿಸಿದರು. ಮೆಟ್ರೋ ವ್ಯವಸ್ಥೆಯಿಂದ ವಿಶೇಷ ಚೇತನ ವ್ಯಕ್ತಿಗಳು, ಹಿರಿಯ ನಾಗರೀಕರಿಗೆ ಬಹಳ ಅನುಕೂಲವಾಗಿದೆ ಎಂದು ವಿಶೇಷವಾಗಿ ತಿಳಿಸಿದರು. ನಮ್ಮ ಮೆಟ್ರೋ ಬಳಸಿ ಈಗಾಗಲೇ ಹಲವಾರು ಬಾರಿ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಂಗಾಂಗಗಳ ಸಾಗಾಣಿಕೆಯನ್ನು ಕೆಲವೇ ನಿಮಿಷಗಳಲ್ಲಿ ಮಾಡಿರುವುದರ ಬಗ್ಗೆ ತಿಳಿದುಕೊಂಡು ಆಶ್ಚರ್ಯದ ಜೊತೆಗೆ ಹರ್ಷ ವ್ಯಕ್ತಪಡಿಸಿದರು ಎಂದು ಶಾಲಿನಿ ರಜನೀಶ್ ತಿಳಿಸಿದರು.
ಬೆಂಗಳೂರು ನಗರ ಒಳಚರಂಡಿ ಮಂಡಳಿಯು ಪ್ರಸ್ತುತ ಕೈಗೊಳ್ಳಲಾಗುತ್ತಿರುವ ಒಳಚರಂಡಿ ನೀರಿನ ಸಂಸ್ಕರಣೆ, ಮರುಬಳಕೆ, ಕೆರೆಗಳಲ್ಲಿ ಸಂಗ್ರಹವಾಗುವ ಹೂಳನ್ನು ತೆಗೆಯುವ ವಿಧಾನಗಳ ಕುರಿತು ವಿವರಿಸುತ್ತಾ ಇದರಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಜರ್ಮನಿಯ ಸಹಭಾಗಿತ್ವವನ್ನು ಕೋರಿದರು ಎಂದರು.
ಮುಖ್ಯಕಾರ್ಯದರ್ಶಿಯವರು ಹಸಿರು ಮತ್ತು ಸುಸ್ಥಿರ ಇಂಧನವನ್ನು ಬಳಸಿಕೊಳ್ಳಲು ಹೆಚ್ಚು ಕಂಪನಿಗಳು ಆಸಕ್ತಿ ಹೊಂದಿರುತ್ತಾರೆ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಹಲವು ಕಡೆ ಬರಡು ಭೂಮಿ ಇದೆ. ಅಲ್ಲಿ ಭೂಮಿಯ ಮಾಲೀಕರಾದ ರೈತರಿಗೆ ಈ ಕಂಪನಿಗಳಿಂದ ಭೋಗ್ಯದ ಮೊತ್ತ ದೊರೆಯುತ್ತಿದೆ. ಈ ಭೂಮಿಯಲ್ಲಿ ಕಂಪನಿಯವರು ಸೋಲಾರ್ ಅನ್ನು ಉತ್ಪಾದಿಸುತ್ತಾರೆ. ವಾಯುಶಕ್ತಿಯಲ್ಲಿ ಈಗಾಗಲೇ ರಾಜ್ಯವು ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಜರ್ಮನಿ ತಂಡದೊಂದಿಗೆ ಮುಖ್ಯಕಾರ್ಯದರ್ಶಿ ಚರ್ಚೆ
Previous Articleಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಡುವುದು ಖಚಿತ.
Next Article ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲವೇ..?

